Sunday, September 20, 2026

BDA Apartments

Home Front Page ವಿಪಕ್ಷ ನಾಯಕ ಸಿದ್ಧರಾಮಯ್ಯ ಮತ್ತೊಂದು ಮಹಾವಲಸೆಗೆ ಸಿದ್ಧತೆಯ ಸೂಚನೆ ಕಂಡು ಬರುತ್ತಿದೆ- ರಾಜ್ಯ ಬಿಜೆಪಿ ಟೀಕೆ….

ವಿಪಕ್ಷ ನಾಯಕ ಸಿದ್ಧರಾಮಯ್ಯ ಮತ್ತೊಂದು ಮಹಾವಲಸೆಗೆ ಸಿದ್ಧತೆಯ ಸೂಚನೆ ಕಂಡು ಬರುತ್ತಿದೆ- ರಾಜ್ಯ ಬಿಜೆಪಿ ಟೀಕೆ….

ಬೆಂಗಳೂರು,ಮೇ,22,2021(www.justkannada.in):  ಕೊರೊನಾದಂತಹ ಸಂದರ್ಭವನ್ನು ಬಳಸಿಕೊಂಡು ವಿಪಕ್ಷನಾಯಕ ಸಿದ್ದರಾಮಯ್ಯ ಮತ್ತೊಂದು ಮಹಾವಲಸೆಗೆ ಸಿದ್ಧತೆ ನಡೆಸಿರುವ ಸೂಚನೆ ಕಂಡುಬರುತ್ತಿದೆ ಎಂದು  ಮಾಜಿ ಸಿಎಂ ಸಿದ್ಧರಾಮಯ್ಯ ಬಗ್ಗೆ ರಾಜ್ಯ ಬಿಜೆಪಿ ಟೀಕಿಸಿದೆ.opposition-leader-siddaramaiah-ready-state-bjp-criticise

ಈ ಬಗ್ಗೆ ಟ್ವೀಟ್ ಮಾಡಿರುವ ರಾಜ್ಯ ಬಿಜೆಪಿ, ಕೋವಿಡ್ ಸಂದರ್ಭದಲ್ಲಿ ಮತ್ತೊಂದು ಮಹಾವಲಸೆಗೆ ಸಿದ್ದರಾಮಯ್ಯ ಸಿದ್ಧವಾಗುತ್ತಿರುವ ಸೂಚನೆ ಕಂಡುಬರುತ್ತಿದೆ. ಸ್ವಕ್ಷೇತ್ರ ಚಾಮುಂಡೇಶ್ವರಿಯಲ್ಲಿ‌ ಸೋತು, ಬಾದಾಮಿ ಕ್ಷೇತ್ರದ ಶಾಸಕರಾಗಿದ್ದರೂ ಚಾಮರಾಜಪೇಟೆ ಕ್ಷೇತ್ರದ ಮೇಲೆ ವಿಶೇಷ ಒಲವು ತೋರುತ್ತಿರುವುದರ ಹಿಂದಿನ ಉದ್ದೇಶವಾದರೂ ಏನು? ಎಂದು ಪ್ರಶ್ನಿಸಿದೆ.

ಹಾಗೆಯೇ  ಕೋವಿಡ್ ಬಂದ ನಂತರ ಬಾದಾಮಿ ಕ್ಷೇತ್ರಕ್ಕೆ ಎಷ್ಟು ಬಾರಿ ಭೇಟಿ ಕೊಟ್ಟಿದ್ದೀರಿ, ಎಷ್ಟು ಲಸಿಕೆ ಹಾಕಿಸಿದ್ದೀರಿ ಎಂದು ಜನರು ಪ್ರಶ್ನೆ ಕೇಳಿದರೆ ಸಿದ್ದರಾಮಯ್ಯನವರಿಗೆ ಸರ್ವಾಂಗವೂ ಉರಿಯುತ್ತದೆ. ಆದರೆ ಚಾಮರಾಜಪೇಟೆ ಕ್ಷೇತ್ರಕ್ಕೆ ಪದೇ ಪದೇ ಭೇಟಿ ನೀಡುವ ಉದ್ದೇಶವನ್ನಾದರೂ ಸ್ಪಷ್ಟಪಡಿಸಲಿ ಎಂದು ರಾಜ್ಯ ಬಿಜೆಪಿ ಸಿದ್ಧರಾಮಯ್ಯಗೆ ಟಾಂಗ್ ನೀಡಿದೆ.opposition-leader-siddaramaiah-ready-state-bjp-criticise

ಸಿದ್ದರಾಮಯ್ಯ ಸಿಎಂ‌ ಆಗಿದ್ದಾಗ ಟಿಪ್ಪು ಜಯಂತಿ ಆಚರಣೆ, ಶಾದಿಭಾಗ್ಯ ಯೋಜನೆಯನ್ನು ಏಕೆ ಜಾರಿಗೆ ತಂದಿದ್ದು ಎಂಬುದಕ್ಕೆ ಈಗ ಉತ್ತರ ಸಿಗುತ್ತಿದೆ. ಚಾಮರಾಜಪೇಟೆಯಂಥ ಕ್ಷೇತ್ರವನ್ನು ಸಮಯ ಬಂದಾಗ ಅಪ್ಪಿಕೊಳ್ಳುವ ಉದ್ದೇಶಕ್ಕಾಗಿ ಅಲ್ಲವೇ..? ಎಂದ  ಸಿದ್ಧರಾಮಯ್ಯಗೆ ಲೇವಡಿ ಮಾಡಿದೆ.

Key words: Opposition leader- Siddaramaiah -ready – State -BJP -criticise