ಎಷ್ಟೇ ಬಾಯಿ ಬಡಿದುಕೊಂಡ್ರೂ ನಿಮ್ಮನ್ನ ವಿಪಕ್ಷನಾಯಕರನ್ನಾಗಿ ಮಾಡಲ್ಲ- ಯತ್ನಾಳ್ ಕಾಲೆಳೆದ ಸಚಿವ ಕೆ.ಜೆ ಜಾರ್ಜ್.

ಬೆಂಗಳೂರು,ಜುಲೈ,10,2023(www.justkannada.in):  ಇಂದು ರಾಜ್ಯ ವಿಧಾನಸಭಾ ಕಲಾಪದಲ್ಲಿ ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆ ವೇಳೆ ಸರ್ಕಾರದ ಐದು ಗ್ಯಾರಂಟಿ ವಿಚಾರವಾಗಿ ಕಾಂಗ್ರೆಸ್ ಮತ್ತು ಬಿಜೆಪಿ ಸದಸ್ಯರ ನಡುವೆ ಜಟಾಪಟಿ ನಡೆಯಿತು. ಈ ಸಮಯದಲ್ಲಿ ವಿಪಕ್ಷ ನಾಯಕ ಸ್ಥಾನದ ವಿಚಾರಕ್ಕೆ ಸಂಬಂಧಿಸಿದಂತೆ ಇಂಧನ ಸಚಿವ ಕೆ.ಜೆ ಜಾರ್ಜ್ ಅವರು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕಾಲೆಳೆದರು.

ಗ್ಯಾರಂಟಿ ಜಾರಿ ಕುರಿತು ಕೊಟ್ಟ ಮಾತು ಈಡೇರಿಸಿಲ್ಲ ಎಂದು ಬಿಜೆಪಿ ಸದಸ್ಯರು ಸದನದಲ್ಲಿ  ಆರೋಪಿಸಿದರು. ಈ ವೇಳೆ  ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮತ್ತು ಕೆ.ಜೆ ಜಾರ್ಜ್ ನಡುವೆ ಮಾತಿನ ಚಕಮಕಿ ನಡೆಯಿತು.

ವಿರೋಧ ಪಕ್ಷದ ನಾಯಕನಾಗಲು ಶಾಸಕ ಯತ್ನಾಳ್​ಗೆ ಆಸೆ ಇದೆ. ಹಾಗಾಗಿ ಪದೇಪದೆ ಎದ್ದು ಯತ್ನಾಳ್​ ಮಾತನಾಡುತ್ತಿದ್ದಾರೆ. ಎಷ್ಟೇ ಬಾಯಿ ಬಡಿದುಕೊಂಡರೂ ವಿಪಕ್ಷ ನಾಯಕರನ್ನಾಗಿ ಮಾಡಲ್ಲ ಎಂದು ಹೇಳುವ ಮೂಲಕ ಸಚಿವ ಕೆ.ಜೆ ಜಾರ್ಜ್  ಮಾತಿನಲ್ಲೇ ಯತ್ನಾಳ್​ ಅವರ ಕಾಲೆಳೆದರು. ಇದಕ್ಕೆ ಪ್ರತ್ಯುತ್ತರ ನೀಡಿದ ಯತ್ನಾಳ್, ನಾನು ಯಾವ ಹುದ್ದೆಗೂ ಆಸೆ ಪಡಲ್ಲ, ಆಸೆ ಪಟ್ಟಿದ್ದರೆ ಮುಖ್ಯಮಂತ್ರಿ ಆಗುತ್ತಿದ್ದೆ ಎಂದರು.

Key words: opposition leader-Minister- K.J George –Basanagowda patil Yatnal.