ಭೂಸುಧಾರಣಾ ಕಾಯ್ದೆ ತಿದ್ಧುಪಡಿಗೆ ವಿರೋಧ: ಶಾಸಕ ಸಾ.ರಾ ಮಹೇಶ್ ಕಚೇರಿ ಮುಂದೆ ರೈತರಿಂದ ಪ್ರತಿಭಟನೆ…

ಮೈಸೂರು,ಜೂ,24,2020(www.justkannada.in):  ಭೂಸುಧಾರಣಾ ಕಾಯ್ದೆ ತಿದ್ದುಪಡಿಗೆ ವಿರೋಧ ವ್ಯಕ್ತಪಡಿಸಿ ಮೈಸೂರಿನಲ್ಲಿ ಜೆಡಿಎಸ್ ಶಾಸಕ ಸಾ.ರಾ ಮಹೇಶ್ ಕಚೇರಿ ಮುಂದೆ ರೈತರು ಪ್ರತಿಭಟನೆ ನಡೆಸಿದರು.

ಭೂ ಸುಧಾರಣಾ ಕಾಯ್ದೆ ತಿದ್ದುಪಡಿಗೆ ವಿರೋಧಿಸಿ ರಾಜ್ಯ ಕಬ್ಬುಬೆಳೆಗಾರರ ಸಂಘ ಹಾಗೂ ರೈತ ಸಂಘಟನೆಯ ಒಕ್ಕೂಟದಿಂದ  ಪ್ರತಿ ಶಾಸಕರ ಮನೆ ಹಾಗೂ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಲಾಗುತ್ತಿದೆ. ಹಾಗೆಯೇ ಜೆಡಿಎಸ್ ಶಾಸಕ ಸಾರಾ ಮಹೇಶ್  ಮನೆ ಹಾಗೂ ಕಚೇರಿ ಮುಂದೆ ರೈತ ಮುಖಂಡ ಕುರುಬೂರು ಶಾಂತಕುಮಾರ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ  ಶಾಸಕರ ಸಾ.ರಾ ಮಹೇಶ್ ಗೆ ಒತ್ತಾಯ ಪತ್ರ ಸಲ್ಲಿಕೆ ಮಾಡಲಾಯಿತು. Opposition - Land Reform Act-  Farmers-protest – MLA-sara Mahesh- mysore

ಭೂಸುಧಾರಣಾ ಕಾಯ್ದೆ ತಿದ್ದುಪಡಿ ವಿರುದ್ಧ ಎಲ್ಲಾ ಶಾಸಕರು ಹೋರಾಟ ಮಾಡುವಂತೆ ಪ್ರತಿಭಟನಾಕಾರರು ಒತ್ತಾಯ ಮಾಡಿದ್ದಾರೆ. ರೈತರ ಪ್ರತಿಭಟನೆಗೆ ಸ್ಪಂದಿಸಿದ ಶಾಸಕ ಸಾ.ರಾ ಮಹೇಶ್, ಕಾಯ್ದೆ ತಿದ್ದುಪಡಿ ಕುರಿತ ಹೋರಾಟಕ್ಕೆ ಬೆಂಬಲ ನೀಡಲಾಗುವುದು.  ಹಾಗೆಯೇ ಈ ಕುರಿತು ಸಿಎಂ ಬಿಎಸ್ ಯಡಿಯೂರಪ್ಪ ಹಾಗೂ ಕಂದಾಯ ಸಚಿವರಿಗೆ ಪತ್ರ ಬರೆಯುವುದಾಗಿ  ಭರವಸೆ ನೀಡಿದರು.

Key words: Opposition – Land Reform Act-  Farmers-protest – MLA-sara Mahesh- mysore