Saturday, August 8, 2026

BDA Apartments

Home Front Page ಆರೋಪ ಮಾಡುವ ಬದಲು ವಿಪಕ್ಷದವರು ಸಲಹೆ ನೀಡಲಿ- ಸಿದ್ಧರಾಮಯ್ಯ ಟೀಕೆಗೆ ಬಿವೈ ವಿಜಯೇಂದ್ರ ತಿರುಗೇಟು.

ಆರೋಪ ಮಾಡುವ ಬದಲು ವಿಪಕ್ಷದವರು ಸಲಹೆ ನೀಡಲಿ- ಸಿದ್ಧರಾಮಯ್ಯ ಟೀಕೆಗೆ ಬಿವೈ ವಿಜಯೇಂದ್ರ ತಿರುಗೇಟು.

ಮಂಡ್ಯ,ಸೆಪ್ಟಂಬರ್,9,2022(www.justkannada.in):  ಬೆಂಗಳೂರಿನ ಮಳೆಹಾನಿ ಬಗ್ಗೆ ಸರ್ಕಾರದ ವಿರುದ್ಧ ಆರೋಪ ಮಾಡಿ ಟೀಕಿಸಿದ್ಧ ವಿಪಕ್ಷ ನಾಯಕ ಸಿದ್ಧರಾಮಯ್ಯಗೆ  ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿವೈ ವಿಜಯೇಂದ್ರ ತಿರುಗೇಟು ನೀಡಿದ್ದಾರೆ.

ಮಂಡ್ಯ ಜಿಲ್ಲೆ ಕೆಆರ್ ಪೇಟೆ ತಾಲ್ಲೂಕಿನ ಕಲ್ಲಹಳ್ಳಿಯಲ್ಲಿ ಮಾತನಾಡಿರುವ ಬಿ ವೈ ವಿಜಯೇಂದ್ರ, ಚುನಾವಣೆ ಹತ್ತಿರ ಬರುತ್ತಿರುವುದರಿಂದ ಸಿದ್ಧರಾಮಯ್ಯ ಆರೋಪ ಮಾಡುತ್ತಿದ್ದಾರೆ. ಈ ಪರಿಸ್ಥಿತಿಗೆ ಯಾರು ಕಾರಣ ಅಂತಾ ಮೇಲ್ನೋಟಕ್ಕೆ  ಗೊತ್ತಾಗಲಿದೆ. ಮಳೆಯಿಂದಾಗಿ ಜನರು ಸಂಕಷ್ಟದಲ್ಲಿದ್ದಾರೆ. ವಿಪಕ್ಷದವರು ಆರೋಪ ಮಾಡುವ ಬದಲು ಸಲಹೆ ನೀಡಬೇಕು.  ಇದರಿಂದ ಜನರಿಗೆ ಉಪಯೋಗವಾಗುತ್ತದೆ ಎಂದು ತಿಳಿಸಿದರು.

Key words: opposition –advise-bjp-BY Vijayendra – Siddaramaiah