ಆಪರೇಷನ್ ಕಮಲ’ ಆದಾಗ ಐಟಿ, ಇಡಿ ಎಲ್ಲಿತ್ತು..? ಮಾಜಿ ಸಚಿವ ಸಾ.ರಾ ಮಹೇಶ್ ಕಿಡಿ…

ಮೈಸೂರು,ಸೆ,9,2019(www.justkannada.in): ಸಾವಿರಾರು ಕೋಟಿ ಭ್ರಷ್ಟಾಚಾರ ನಡೆಯುತ್ತಿದ್ದ ವೇಳೆ  ಐಟಿ, ಇಡಿ ಅಧಿಕಾರಿಗಳು ಏನು ಹೊರ ದೇಶಕ್ಕೆ ಹೋಗಿದ್ರಾ..? ಎಂದು ಮಾಜಿ ಸಚಿವ ಸಾ.ರಾ ಮಹೇಶ್ ಕಿಡಿಕಾರಿದರು.

ಮೈಸೂರಿನಲ್ಲಿ ಇಂದು ಮಾತನಾಡಿ  ಇಡಿಯಿಂದ  ಡಿ.ಕೆ ಶಿವಕುಮಾರ್ ಬಂಧನ ಕುರಿತು ಕೇಂದ್ರ ಸರ್ಕಾರದ ವಿರುದ್ದ ಅಸಮಾಧಾನ ಹೊರ ಹಾಕಿದ ಮಾಜಿ ಸಚಿವ ಸಾ.ರಾ ಮಹೇಶ್, ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ವಿರೋಧ ಪಕ್ಷಗಳನ್ನು ಹತ್ತಿಕ್ಕುವಂತ ಕೆಲಸ ನಡಿಯುತ್ತಿದೆ. ದೇಶದಲ್ಲಿನ ಬೇರೆ ಬೇರೆ ರಾಜ್ಯದಲ್ಲಿರು ವಿರೋಧ ಪಕ್ಷಗಳನ್ನ ಮಟ್ಟ ಹಾಕುವ ಕೆಲಸವಾಗ್ತಿದೆ. ಕಾನೂನಿನ ಮೂಲಕ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುತ್ತಿದೆ. ಡಿಕೆಶಿ ತಮ್ಮ ಹಿರಿಯರಿಗೆ ಧೂಪವನ್ನು ಹಾಕಲು ಸಹ ಅವಕಾಶ ಕೊಟ್ಟಿಲ್ಲ ಎಂದು ವಾಗ್ದಾಳಿ ನಡೆಸಿದರು.

ರಾಜ್ಯ ಸರ್ಕಾರ ಆಡಳಿತಕ್ಕೆ ಬರಲು ಆಪರೇಷನ್ ಕಮಲ ಆದಾಗ ಐಟಿ, ಇಡಿ ಎಲ್ಲಿತ್ತು ಎಂದು ಪ್ರಶ್ನಿಸಿದ ಸಾ.ರಾ ಮಹೇಶ್, ಸಾವಿರಾರು ಕೋಟಿ ಭ್ರಷ್ಟಾಚಾರ ನಡೀತಿದ್ದಾಗ ಐಟಿ, ಇಡಿ ಅಧಿಕಾರಿಗಳು ಹೊರ ದೇಶಕ್ಕೆ ಹೋಗಿದ್ರಾ ಎಂದು ಹರಿಹಾಯ್ದರು.

Key words: Operation kamala-IT, ED- where – Former Minister-sa ra  Mahesh