ಕನಕದಾಸ ನಗರದಲ್ಲಿ ನೈಪುಣ್ಯ ಸ್ಕೂಲ್ ಕಾರ್ಪೋರೇಟ್ ಕಚೇರಿ ಆರಂಭ.

ಮೈಸೂರು,ಜನವರಿ,28,2023(www.justkannada.in):  ಮುಂದಿನ ಶೈಕ್ಷಣಿಕ ವರ್ಷದಿಂದ ಕನಕದಾಸ ನಗರದಲ್ಲಿ ಕಾರ್ಯಾರಂಭ ಮಾಡಲಿರುವ ನೈಪುಣ್ಯ ಸ್ಕೂಲ್ ಆಫ್ ಎಕ್ಸ್‌ಲೈನ್ಸ್‌ನ ಕಾರ್ಪೋರೇಟ್ ಕಚೇರಿಯನ್ನು ಮೈಸೂರು ಮಹಾನಗರ ಪಾಲಿಕೆ ಮೇಯರ್ ಶಿವಕುಮಾರ್ ಉದ್ಘಾಟಸಿದರು.

ಇದೇ ಸಂದರ್ಭದಲ್ಲಿ ಮಾತನಾಡಿದ  ಮೇಯರ್ ಶಿವಕುಮಾರ್ ಅವರು, ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಯಾಗುತ್ತಿರುವ ಈ ಸಂದರ್ಭದಲ್ಲಿ ಗುಣಮಟ್ಟದ ಹಾಗೂ ನೈಜ ಶಿಕ್ಷಣ ನಮ್ಮ ವಿದ್ಯಾರ್ಥಿಗಳಿಗೆ ಲಭಿಸಬೇಕಿದೆ. ಅದರಲ್ಲೂ ಪ್ರಾಥಮಿಕ ಶಿಕ್ಷಣದಲ್ಲಿ ಬದಲಾವಣೆಯ  ಪರ್ವ ಆರಂಭವಾಗಿದೆ. ಈ ನಿಟ್ಟಿನಲ್ಲಿ ಶಿಕ್ಷಣ ಸಂಸ್ಥೆಗಳನ್ನು ಕಟ್ಟುವಲ್ಲಿ ತಮ್ಮದೇ ಆದ ಸಾಮರ್ಥ್ಯ ರೂಪಿಸಿ ಮೈಸೂರಿನ ಶಿಕ್ಷಣ ಕ್ಷೇತ್ರಕ್ಕೆ ಆರ್.ರಘು ಅವರು ಮಹತ್ವದ ಕೊಡುಗೆ ಕೊಟ್ಟಿದ್ದಾರೆ.

ಕಳೆದ ಶೈಕ್ಷಣಿಕ ವರ್ಷದಲ್ಲಿ ರವೀಂದ್ರನಾಥ ಟ್ಯಾಗೂರ್ ನಗರದಲ್ಲಿ ನೈಪುಣ್ಯ ಕ್ಯಾಂಪಸ್ ಆರಂಭಿಸಿ ಗುಣಮಟ್ಟ ಶಿಕ್ಷಣ ನೀಡುತ್ತಿರುವ ರಘು ಅವರ ನೇತೃತ್ವದ ಸಂಸ್ಥೆ ಇದೀಗ ಅಭಿವೃದ್ಧಿ ಹೊಂದಿರುವ ಕನಕದಾಸ ನಗರದಲ್ಲಿ (ದಟ್ಟಗಳ್ಳಿ) ಮತ್ತೊಂದು ಕ್ಯಾಂಪಸ್‌ ನ್ನು ಹೊಸದಾಗಿ ನಿರ್ಮಿಸಲು ಹೊರಟಿರುವುದು ಶ್ಲಾಘನೀಯ ಕಾರ್ಯವಾಗಿದೆ. ಈ ಭಾಗದ ಜನತೆಗೆ ಈ ಸಂಸ್ಥೆ ಜಾಗತಿಕ ಮಟ್ಟದಲ್ಲಿ ಪೈಪೋಟಿಯನ್ನು ಎದುರಿಸುವ, ವಿದ್ಯಾರ್ಥಿಗಳನ್ನು ರೂಪಿಸುವ ಶಿಕ್ಷಣ ಸಂಸ್ಥೆಯಾಗಿ ನೈಪುಣ್ಯ ಸ್ಕೂಲ್ ಆಫ್ ಎಕ್ಸ್‌ಲೈನ್ಸ್ ಎಂದು ಹಾರೈಸಿದರು.

ಇದೇ ಸಂದರ್ಭದಲ್ಲಿ ನೈಪುಣ್ಯ ಸಂಸ್ಥೆಯ ಮುಖ್ಯಸ್ಥರು ಆದ ಮೈಸೂರು ಪೇಂಟ್ ಅಂಡ್ ವಾರ್ನಿಶ್‌ನ ಅಧ್ಯಕ್ಷ ಆರ್.ರಘು ಅವರು, ಆರ್ಥಿಕ ಸಲಹೆಗಾರ ನಾರಾಯಣ ಗೌಡ, ಪಿಆರ್‌ ಓ ಪ್ಯಾರೋಲಿನ್ ಅಲ್ವಿನ್, ಮ್ಯಾನೇಜಿಂಗ್ ಟ್ರಸ್ಟಿ ಕೌಟಿಲ್ಯ ಈ  ಸಂದರ್ಭದಲ್ಲಿ ಉಪಸ್ಥಿತರಿದ್ದರು.

Key words: Opening – Skill- School -Corporate Office -Kanakadasa Nagar-mysore