ಊಟಿ ಮತ್ತು ತಾಳವಾಡಿ ಕರ್ನಾಟಕಕ್ಕೆ ಸೇರಬೇಕು- ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್…

ಬೆಂಗಳೂರು,ಫೆಬ್ರವರಿ,8,2021(www.justkannada.in): ಊಟಿ ಮತ್ತು ತಾಳವಾಡಿ ಕರ್ನಾಟಕಕ್ಕೆ ಸೇರಬೇಕು ಎಂದು ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಆಗ್ರಹಿಸಿದ್ದಾರೆ.jk

ಇಂದು ಮಾಧ್ಯಮಗಳ ಜತೆ ಮಾತನಾಡಿದ ವಾಟಾಳ್ ನಾಗರಾಜ್, ಚಾಮರಾಜನಗರದ ಸಮಗ್ರ ಅಭಿವೃದ್ಧಿಗೆ ಇಡೀ ಸಮಗ್ರ ಕನ್ನಡಿಗರ ಮೆರವಣಿಗೆ ಇದೇ ತಿಂಗಳ 10 ರಂದು ನಡೆಯಲಿದೆ. ಅಂದು ಬೆಂಗಳೂರಿನಿಂದ ಚಾಮರಾಜನಗರದ ಗಡಿಯವರೆಗೆ ಮೆರವಣಿಗೆ ಬರಲಿದೆ.ಚಾಮರಾಜನಗರದ ಅಭಿವೃದ್ಧಿಗಾಗಿ ನೂರಾರು ವಾಹನಗಳಲ್ಲಿ ಮೆರವಣಿಗೆ ಬಂದು ಜೋಡಿ ರಸ್ತೆ ಮಾರ್ಗವಾಗಿ ಗಡಿ ಪ್ರದೇಶ ಪುಣಜನೂರಿನವರೆಗೆ ಸಾಗುತ್ತದೆ ಎಂದರು.Ooty – Talawadi- join -Karnataka - Kannada fighter- Vatal Nagaraj

ಮತ್ತೆ ಹಿಂದಕ್ಕೆ ಚಾಮರಾಜನಗರದ ಅಂಗಡಿ ಬೀದಿಗಳಲ್ಲಿ ಮೆರವಣಿಗೆ ಸಾಗಿ ಮದ್ದೂರು, ಚನ್ನಪಟ್ಟಣ, ರಾಮನಗರ, ಬೆಂಗಳೂರು ತಲುಪುವವರೆಗೆ ಭಾರೀ ಮೆರವಣಿಗೆ ನಡೆಯಲಿದೆ ಎಂದು ಕನ್ನಡ ಚಳುವಳಿ ಪಕ್ಷದ ವಾಟಾಳ್ ನಾಗರಾಜ್ ತಿಳಿಸಿದರು.

Key words: Ooty – Talawadi- join -Karnataka – Kannada fighter- Vatal Nagaraj