Saturday, October 10, 2026

BDA Apartments

Increase in COVID cases: DC’s village stay program with held BDA JK_Adv BDA Adv
Home Front Page ಕೊರೋನಾ ಕಂಟ್ರೋಲ್ ಆಗದಿದ್ರೆ ಮತ್ತೆ ಒಂದು ವಾರ ಕರ್ಫ್ಯೂ- ಸಚಿವ ಜಗದೀಶ್ ಶೆಟ್ಟರ್…

ಕೊರೋನಾ ಕಂಟ್ರೋಲ್ ಆಗದಿದ್ರೆ ಮತ್ತೆ ಒಂದು ವಾರ ಕರ್ಫ್ಯೂ- ಸಚಿವ ಜಗದೀಶ್ ಶೆಟ್ಟರ್…

ಧಾರವಾಡ, ಏಪ್ರಿಲ್,29,2021(www.justkannada.in):  ರಾಜ್ಯದಲ್ಲಿ ಕೊರೋನಾ ತಡೆಗಾಗಿ 14 ದಿನಗಳ ಕಾಲ ಜನತಾ ಕರ್ಫ್ಯೂ ಜಾರಿ ಮಾಡಲಾಗಿದ್ದು ಈ ಮಧ್ಯೆ ಮತ್ತೆ ಒಂದು ವಾರ ಕರ್ಫ್ಯೂ ಮುಂದುವರೆಸುವ ಬಗ್ಗೆ ಕೈಗಾರಿಕೆ ಸಚಿವ ಜಗದೀಶ್ ಶೆಟ್ಟರ್ ಸುಳಿವು ನೀಡಿದ್ದಾರೆ.jk

ಈ ಕುರಿತು ಧಾರವಾಡದಲ್ಲಿ ಮಾತನಾಡಿರುವ ಸಚಿವ ಜಗದೀಶ್ ಶೆಟ್ಟರ್, ಜಿಲ್ಲಾ ಉಸ್ತುವಾರಿಗಳ ಜತೆ ಸಿಎಂ ಚರ್ಚೆ ನಡೆಸಿದ್ದಾರೆ. ಕೊರೋನಾ ನಿಯಂತ್ರಣದ ಬಗ್ಗೆ ಸಲಹೆ ನೀಡಿದ್ದಾರೆ. ಆಕ್ಸಿಜನ್ ಬೆಡ್ ವ್ಯವಸ್ಥೆಗೂ ಸೂಚನೆ ನೀಡಿದ್ದಾರೆ ಎಂದರು.one-week-curfew-again-minister-jagdish-shetter

ಒಟ್ಟು ಮೂರು ವಾರದ ಕರ್ಫ್ಯೂ ಬಗ್ಗೆ ಸಿಎಂ ಮಾತನಾಡಿದ್ದಾರೆ. ಈಗಾಗಲೇ 14 ದಿನಗಳ ಕಾಲ ಕರ್ಫ್ಯೂ ಜಾರಿಗೊಳಿಸಲಾಗಿದೆ. ಕೊರೋನಾ ಕಂಟ್ರೋಲ್ ಆಗದಿದ್ದರೇ ಮತ್ತೆ ಒಂದು ವಾರ ಕರ್ಫ್ಯೂ ವಿಸ್ತರಣೆ ಮಾಡಬಹುದು. ಜನರು ಜನತಾ ಕರ್ಫ್ಯೂಗೆ ಸಹಕರಿಸಬೇಕು ಎಂದು ಸಚಿವ ಜಗದೀಶ್ ಶೆಟ್ಟರ್ ಮನವಿ ಮಾಡಿದರು.

Key words: One week -curfew –again-Minister -Jagdish Shetter.