ಮೈಸೂರು ವಾರ್ಸಿಟಿಯಲ್ಲಿರುವ ಖಾಲಿ ಹುದ್ದೆ ಭರ್ತಿಗೆ ಸರಕಾರದ ಗ್ರೀನ್ ಸಿಗ್ನಲ್..!

0
834

 

ಮೈಸೂರು, ಫೆ.13, 2020 ” (www.justkannada.in news ) ದೇಶದ ಅತ್ಯಂತ ಹಳೆಯ ವಾರ್ಸಿಟಿಗಳಲ್ಲಿ ಒಂದಾದ ಮೈಸೂರು ವಿಶ್ವವಿದ್ಯಾಲಯ ಸದ್ಯ ಎದುರಿಸುತ್ತಿರುವ ಪ್ರಾಧ್ಯಾಪಕರು ಮತ್ತು ಇತರ ಸಿಬ್ಬಂದಿಗಳ ತೀವ್ರ ಕೊರತೆ ನೀಗಿಸಲು ಅವಶ್ಯಕ ಸಿಬ್ಬಂದಿ ನೇಮಕಕ್ಕೆ ರಾಜ್ಯ ಸರಕಾರ ಮೌಖಿಕ ಸಮ್ಮತಿ ನೀಡಿದೆ.

ವಿಶ್ವವಿದ್ಯಾಲಯದಲ್ಲಿನ ಬೋಧಕ ಸಿಬ್ಬಂದಿ ಸಮಸ್ಯೆಯಿಂದ ಕ್ಯಾಂಪಸ್‌ನಲ್ಲಿ ಸಂಶೋಧನಾ ಕಾರ್ಯಗಳ ಮೇಲೆ ವ್ಯತಿರಿಕ್ತವಾದ ಪರಿಣಾಮ ಬೀರಿತ್ತು. ಜತೆಗೆ ಶಿಕ್ಷಣದ ಗುಣಮಟ್ಟದ ಬಗ್ಗೆ ಕಳವಳವನ್ನು ಉಂಟುಮಾಡಿತ್ತು. ಈ ಹಿನ್ನೆಲೆಯಲ್ಲಿ ಕುಲಪತಿ ಪ್ರೊ.ಜೆ.ಹೇಮಂತ್ ಕುಮಾರ್ ಅವರು ಉಪಮುಖ್ಯಮಂತ್ರಿ ಹಾಗೂ ಉನ್ನತ ಶಿಕ್ಷಣ ಸಚಿವ ಡಾ. ಅಶ್ವಥನಾರಾಯಣ ಅವರನ್ನು ಕಂಡು ಯೂನಿವರ್ಸಿಟಿ ಸಮಸ್ಯೆ ಬಗ್ಗೆ ಬೆಳಕು ಚೆಲ್ಲಿದರು.

mysore-university-chinees-students-informed-not-to-come-back-mysore-vc-hemanthkumar

ಈ ಸಂಬಂಧ ಜಸ್ಟ್ ಕನ್ನಡ ಡಾಟ್ ಇನ್ ಜತೆ ಮಾತನಾಡಿದ ಕುಲಪತಿ ಪ್ರೊ.ಜೆ.ಹೇಮಂತ್ ಕುಮಾರ್ ಅವರು ಹೇಳಿದಿಷ್ಟು…
ಕೆಲ ದಿನಗಳ ಹಿಂದೆ ಉನ್ನತ ಶಿಕ್ಷಣ ಸಚಿವರನ್ನು ಭೇಟಿ ಮಾಡಿ ಮೈಸೂರು ವಿವಿ ಎದುರಿಸುತ್ತಿರುವ ಸಿಬ್ಬಂದಿ ಕೊರತೆ ಬಗ್ಗೆ ಮಾಹಿತಿ ನೀಡಿದೆ. ಇದೇ ವೇಳೆ ಈ ಹಿಂದೆ, ಹಿಂದಿನ ಸರಕಾರದ ಅವಧಿಯಲ್ಲಿ ಹಲವಾರು ಬಾರಿ ಪತ್ರ ಬರೆದು ಸಮಸ್ಯೆ ಬಗೆಹರಿಸಲು ಸಹಕರಿಸುವಂತೆ ಮನವಿ ಮಾಡಿದ್ದನ್ನು ನೆನಪಿಸಿದೆ.
ಈ ಹಿಂದೆ ಮೈಸೂರು ವಿವಿಗೆ ನೇಮಕಾತಿಗಳನ್ನು 2006-07 ರಲ್ಲಿ ಮಾಡಲಾಗಿತ್ತು.ಆದಾದ ನಂತರ ಯಾವುದೇ ಖಾಯಂ ಬೋಧಕರ ನೇಮಕವಾಗಿಲ್ಲ. ಪರಿಣಾಮ, ಅತಿಥಿ ಉಪನ್ಯಾಸಕರ ಸೇವೆಗಳ ಮೇಲೆಯೇ ವಿಶ್ವವಿದ್ಯಾಲಯ ಅವಲಂಬಿತವಾಗುವ ವಾತಾವರಣ ನಿರ್ಮಾಣವಾಗಿರುವ ಅಂಶವನ್ನು ಸಚಿವರ ಗಮನಕ್ಕೆ ತರಲಾಯಿತು.

One of the country’s oldest varsities, University of Mysore , faces a severe shortage of professors and other staff

ಜತೆಗೆ ರಾಷ್ಟ್ರೀಯ ಮೌಲ್ಯಮಾಪನ ಮತ್ತು ಮಾನ್ಯತಾ ಮಂಡಳಿಯ (ಎನ್‌ಎಎಸಿ- ನ್ಯಾಕ್ ) ಸಮಿತಿಯು ವಾರ್ಸಿಟಿಗೆ ರೇಟಿಂಗ್ ನೀಡುವ ಸಂದರ್ಭದಲ್ಲಿ ತೀವ್ರ ಸಿಬ್ಬಂದಿ ಕೊರತೆಯನ್ನು ಗಮನಿಸಿದೆ. ಆದ್ದರಿಂದ ಆದಷ್ಟು ಬೇಗ ಖಾಯಂ ಸಿಬ್ಬಂದಿ ನೇಮಕದ ಮೂಲಕ ನ್ಯಾಕ್ ಮಾನ್ಯತೆ ಉಳಿಸಿಕೊಳ್ಳಬಹುದಾಗಿದೆ ಎಂಬುದನ್ನು ಸಚಿವರಿಗೆ ಮನದಟ್ಟು ಮಾಡಲಾಯಿತು.
ಕೂಡಲೇ ಇದಕ್ಕೆ ಸಕರಾತ್ಮಕವಾಗಿ ಸ್ಪಂದಿಸಿದ ಸಚಿವರು, ಅವಶ್ಯಕ ಸಿಬ್ಬಂದಿ ನೇಮಕಕ್ಕೆ ಅಗತ್ಯ ಕ್ರಮ ಕೈಗೊಳ್ಳಿ. ಸದ್ಯದಲ್ಲೇ ಈ ಬಗ್ಗೆ ಆಡಳಿತಾತ್ಮಕ ಮಂಜೂರು ಕೊಡಿಸಿಕೊಡುತ್ತೇನೆ ಎಂದು ಭರವಸೆ ನೀಡಿದರು ಎಂದು ಕುಲಪತಿ ಪ್ರೊ.ಹೇಮಂತ್ ಕುಮಾರ್ ತಿಳಿಸಿದರು.

ಅರ್ಧಕ್ಕರ್ಧ ಖಾಲಿ :
ಮೈಸೂರು ವಿವಿಯಲ್ಲಿನ ಸಿಬ್ಬಂದಿ ಸಂಖ್ಯೆ ದಿಗ್ಭ್ರಮೆಯುಂಟುಮಾಡುತ್ತದೆ. ಪ್ರಾಧ್ಯಾಪಕರ ಹುದ್ದೆಗಳಲ್ಲಿ ಸುಮಾರು 75 ಪ್ರತಿಶತ, ಸಹ ಪ್ರಾಧ್ಯಾಪಕರಲ್ಲಿ ಶೇಕಡಾ 66 ಮತ್ತು ಸಹಾಯಕ ಪ್ರಾಧ್ಯಾಪಕರಲ್ಲಿ ಶೇಕಡಾ 46 ರಷ್ಟು ಹುದ್ದೆಗಳು ಖಾಲಿ ಇವೆ. ಒಟ್ಟಾರೆಯಾಗಿ, ವಿಶ್ವವಿದ್ಯಾನಿಲಯವು ಪದವಿಪೂರ್ವ ಮತ್ತು ಸ್ನಾತಕೋತ್ತರ ವಿಭಾಗಗಳಲ್ಲಿ ಶೇಕಡಾ 52 ರಿಂದ 55 ರಷ್ಟು ಹುದ್ದೆಗಳನ್ನು (ಬೋಧನೆ ಮತ್ತು ಬೋಧಕೇತರ) ಭರ್ತಿ ಮಾಡಬೇಕಾಗಿದೆ ಎನ್ನುತ್ತಾರೆ ಮೈಸೂರು ವಿವಿ ಸಿಂಡಿಕೇಟ್ ಸದಸ್ಯ ಈ.ಸಿ.ನಿಂಗರಾಜು.
ಈ ನಡುವೆ, ಕೆಲ ಪ್ರಾಧ್ಯಾಪಕರು ಮತ್ತು ಸಹ ಪ್ರಾಧ್ಯಾಪಕರು ಈ ವರ್ಷದ ಕೊನೆಯಲ್ಲಿ ನಿವೃತ್ತಿಯಾಗಲಿರುವುದರಿಂದ ಹಾಲಿ ಕರ್ತವ್ಯ ನಿರ್ವಹಿಸುತ್ತಿರುವ ಬೋಧಕ ಸಿಬ್ಬಂದಿಗಳ ಸಂಖ್ಯೆಯಲ್ಲಿ ಮತ್ತಷ್ಟು ಗಣನೀಯ ಕುಸಿತವಾಗಲಿದೆ ಎಂಬುದು ಆತಂಕಕ್ಕೆ ಕಾರಣವಾಗಿದೆ ಎನ್ನುತ್ತಾರೆ ನಿಂಗರಾಜು.

 

key words : One of the country’s oldest varsities, University of Mysore , faces a severe shortage of professors and other staff,