ಒಂದೂವರೆ ವರ್ಷದಲ್ಲಿ ಯಾವ, ಯಾವ ಜಿಲ್ಲೆಗೆ ಎಷ್ಟು ಹಣ ಕೊಟ್ಟಿದ್ದೀರಾ? : ಮಾಜಿ ಸಚಿವ ಎಚ್.ಡಿ.ರೇವಣ್ಣ

ಹಾಸನ,ಮಾರ್ಚ್,12,2021(www.justkannada.in) : ಒಂದೂವರೆ ವರ್ಷ ಯಾವ, ಯಾವ ಜಿಲ್ಲೆಗೆ ಎಷ್ಟು ಹಣ ಕೊಟ್ಟಿದ್ದೀರಾ(?)  ಅಂತ ಸಿಎಂ ಅಧಿವೇಶನದಲ್ಲಿಯೇ ಹೇಳಲಿ. ಈ ಬಗ್ಗೆ ಸಿಎಂ ಬಿ.ಎಸ್.ಯಡಿಯೂರಪ್ಪ ಶ್ವೇತಪತ್ರ ಹೊರಡಿಸಲಿ ಎಂದು ಮಾಜಿ ಸಚಿವ ಎಚ್.ಡಿ.ರೇವಣ್ಣ ಹೇಳಿದ್ದಾರೆ.jkಮಾಧ್ಯಮದೊಂದಿಗೆ ಮಾತನಾಡಿ, ಇನ್ನು ಎರಡು ವರ್ಷ ಕೊಡಲ್ಲ ಅಂತ ಅದನ್ನಾದರೂ ಹೇಳಲಿ. ಕೊಡಲ್ಲ ಅಂತ ಹೇಳಲಿ ಆಮೇಲೆ ನೋಡೋಣ ಎಂದಿದ್ದಾರೆ.

ಒಳ್ಳೆಯದು ಕೆಟ್ಟದ್ದು ನಮಗೆ ಗೊತ್ತಿಲ್ಲ, ದೇವರಿಗೆ ಗೊತ್ತು

ರಮೇಶ್ ಜಾರಕಿಹೋಳಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಒಬ್ಬ ನಾಯಕ ಸಮಾಜದಲ್ಲಿ ಕಷ್ಟಪಟ್ಟು ಮೇಲೆ ಬಂದ ವ್ಯಕ್ತಿ. ಅವರೇ ವಿಡಿಯೋ ಫೇಕ್ ಅಂತ ಹೇಳುತ್ತಿದ್ದಾರೆ. ಒಳ್ಳೆಯದು ಕೆಟ್ಟದ್ದು ನಮಗೆ ಗೊತ್ತಿಲ್ಲ, ದೇವರಿಗೆ ಗೊತ್ತು. ಇಲ್ಲಿ ಪರ್ಸನಲ್ ವಿಷಯಗಳನ್ನು ತರಬಾರದು ಎಂದಿದ್ದಾರೆ.

ಮನುಷ್ಯನಿಗೆ ನೋವಾದಾಗ ಆತನಿಗೆ ಧೈರ್ಯ ಹೇಳುವುದರಲ್ಲಿ ತಪ್ಪೇನು(?)

ಇನ್ನು ಒಬ್ಬ ಮನುಷ್ಯನಿಗೆ ನೋವಾದಾಗ ಆತನಿಗೆ ಧೈರ್ಯ ಹೇಳುವುದರಲ್ಲಿ ತಪ್ಪೇನು(?) ನಾವು ಅವರಿಗೆ ಧೈರ್ಯ ತುಂಬಿರೋದು ಸತ್ಯ. ಇದರಲ್ಲಿ ಪಕ್ಷ ಮುಖ್ಯ ಅಲ್ಲ, ಮನುಷ್ಯತ್ವ ಮುಖ್ಯ. ಯಾರದ್ದೇ ಇರಲಿ ವೈಯಕ್ತಿಕವಾಗಿ ಸಮಸ್ಯೆಯಾದಾಗ ಬೆಂಬಲಕ್ಕೆ ನಿಲ್ಲಬೇಕು.

One,half,During,year,Which,what,district,How,much,money,Got it?,Former Minister,H.D.Rewanna

ದೊಡ್ಡ ಸಮಾಜದ ವ್ಯಕ್ತಿಯಾಗಿದ್ದರೆ ಹೆದರಿಸುತ್ತಿದ್ದರು

ಅವರಿಗೆ ಧೈರ್ಯವಾಗಿರು ಅಂತ ನಾವು ಹೇಳಿದ್ದೇವೆ. ರಾಜಕಾರಣ ಹೋಗುತ್ತೆ, ಬಿಡುತ್ತೆ, ಇದನ್ನು ರಾಜಕೀಯಕ್ಕೆ ಬಳಸಿಕೊಳ್ಳಬಾರದು. ಒಂದು ಸಣ್ಣ ಸಮಾಜದ ವ್ಯಕ್ತಿಯಾದ್ದರಿಂದ ಹೆದರಿಸಲಾಗುತ್ತಿಲ್ಲ, ಅದೇ ದೊಡ್ಡ ಸಮಾಜದ ವ್ಯಕ್ತಿಯಾಗಿದ್ದರೆ ಹೆದರಿಸುತ್ತಿದ್ದರು ಎಂದು ಮಾಜಿ ಹೆಚ್​.ಡಿ ರೇವಣ್ಣ ಅವರು ರಮೇಶ್ ಜಾರಕಿಹೊಳಿ ಪರ ಮಾತನಾಡಿದ್ದಾರೆ.

key words : One-half-During-year-Which-what-district-How-much-money-Got it?-Former Minister-H.D.Rewanna