Friday, August 21, 2026

BDA Apartments

Home Front Page ಮತ್ತೆ ಕುತೂಹಲ ಮೂಡಿಸಿದ ಬೆಲ್ಲದ್-ಬಿ.ಎಲ್.ಸಂತೋಷ್ ದಿಲ್ಲಿ ಭೇಟಿ

ಮತ್ತೆ ಕುತೂಹಲ ಮೂಡಿಸಿದ ಬೆಲ್ಲದ್-ಬಿ.ಎಲ್.ಸಂತೋಷ್ ದಿಲ್ಲಿ ಭೇಟಿ

ಬೆಂಗಳೂರು, ಜೂನ್ 13, 2021 (www.justkannada.in): ಶಾಸಕ ಅರವಿಂದ ಬೆಲ್ಲದ್, ಬಿಜೆಪಿ ರಾಷ್ಟ್ರೀಯ ಪ್ರಧಾನಕಾರ್ಯದರ್ಶಿ ಬಿ.ಎಲ್. ಸಂತೋಷ್ ಭೇಟಿಯಾಗಿ ಮಹತ್ವದ ಮಾತುಕತೆ ನಡೆಸಿದ್ದಾರೆ.

ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಚರ್ಚೆ ಮತ್ತೆ ತಾರಕಕ್ಕೇರಿರುವ ನಡುವೆಯೇ ದೆಹಲಿಗೆ ದೌಡಾಯಿಸಿರುವ ಬೆಲ್ಲದ್ ಸಂತೋಷ್ ಭೇಟಿ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.

ದೆಹಲಿಯಲ್ಲಿ ಸಂತೋಷ್ ನಿವಾಸದಲ್ಲಿ ಭೇಟಿಯಾದ ಅರವಿಂದ್ ಬೆಲ್ಲದ್ ಎರಡು ಗಂಟೆಗಳ ಕಾಲ ಚರ್ಚೆ ನಡೆಸಿದ್ದಾರೆ.  ನಾಯಕತ್ವ ಬದಲಾವಣೆ ವಿಚಾರದ ಬಗ್ಗೆ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.

ಬಿ.ಎಲ್. ಸಂತೋಷ್ ಭೇಟಿ ಬಳಿಕ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಭೇಟಿ ಮಾಡಲು ನಡೆಸಿದ ಯತ್ನ ಸಫಲವಾಗಿಲ್ಲ ಎನ್ನಲಾಗಿದೆ. Arnab Goswami-arrested-attack-freedom-speech-Tweet-B.L.Santosh