Thursday, September 24, 2026

BDA Apartments

Home Front Page ಮೈಸೂರಿನಲ್ಲಿ ಸದ್ಯಕ್ಕೆ ತಪ್ಪಿದ ಒಮಿಕ್ರಾನ್ ಆತಂಕ.

ಮೈಸೂರಿನಲ್ಲಿ ಸದ್ಯಕ್ಕೆ ತಪ್ಪಿದ ಒಮಿಕ್ರಾನ್ ಆತಂಕ.

ಮೈಸೂರು,ಡಿಸೆಂಬರ್,3,2021(www.justkannada.in):  ದಕ್ಷಿಣ ಆಫ್ರಿಕಾದಲ್ಲಿ ಪತ್ತೆಯಾಗಿರುವ ಕೊರೋನಾ ಹೊಸತಳಿ ಒಮಿಕ್ರಾನ್  ಸಾಕಷ್ಟು ತಲ್ಲಣ ಮೂಡಿಸಿದ್ದು ಇದೀಗ ಒಮಿಕ್ರಾನ್ ವೈರಸ್ ಕರ್ನಾಟಕಕ್ಕೂ ಕಾಲಿಟ್ಟಿದೆ.

ಬೆಂಗಳೂರಿನ ಇಬ್ಬರಿಗೆ ಒಮಿಕ್ರಾನ್ ಸೋಂಕು ತಗುಲಿದ್ದು ಸಾಕಷ್ಟು ಭೀತಿ ಎದುರಾಗಿದೆ. ಈ ಮಧ್ಯೆ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಸದ್ಯಕ್ಕೆ ಒಮಿಕ್ರಾನ್ ಆತಂಕ ತಪ್ಪಿದೆ. ವಾರದ ಹಿಂದೆ ಪಾಸಿಟಿವ್ ಆಗಿದ್ದ ಮೈಸೂರಿನ ನರ್ಸಿಂಗ್ ವಿದ್ಯಾರ್ಥಿಗಳ ಒಮಿಕ್ರಾನ್ ವರದಿ ನೆಗೆಟಿವ್ ಬಂದಿದ್ದು ಸದ್ಯ ಆತಂಕ ದೂರಾಗಿದೆ.

ನರ್ಸಿಂಗ್ ವಿದ್ಯಾರ್ಥಿಗಳಿಗೆ ಪಾಸಿಟಿವ್ ಬಂದ ಬಳಿಕ ಎಲ್ಲರ ಸ್ಯಾಂಪಲ್ ಅನ್ನು ಬೆಂಗಳೂರಿನ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಇದೀಗ ವರದಿ ನೆಗೆಟಿವ್ ಬಂದಿದೆ ಎಂದು ಮೈಸೂರು ಜಿಲ್ಲಾ ಆರೋಗ್ಯಾಧಿಕಾರಿ ಡಾ ಕೆ ಎಚ್ ಪ್ರಸಾದ್ ಮಾಹಿತಿ ನೀಡಿದ್ದಾರೆ.

Key words: Omicron -anxiety –no- Mysore.