ಬೆಂಗಳೂರು,ನವೆಂಬರ್,7,2025 (www.justkannada.in): ಪ್ರತಿಟನ್ ಕಬ್ಬಿಗೆ 3500 ರೂ. ನಿಗದಿ ಮಾಡುವಂತೆ ಆಗ್ರಹಿಸಿ ರೈತರ ಹೋರಾಟ ಮುಂದುವರೆದಿದ್ದು ಈ ನಡುವೆ ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲ್ಲೂಕು ಹತ್ತರಗಿ ಬಳಿ ರೈತರ ಮೇಲೆ ಲಾಠಿಚಾರ್ಜ್ ಮಾಡಲಾಗಿದೆ ಎನ್ನಲಾಗಿತ್ತು. ಆದರೆ ಈ ಬಗ್ಗೆ ಬೆಳಗಾವಿ ಎಸ್.ಪಿ ಭೀಮಾಶಂಕರ್ ಗುಳೇದ್ ಸ್ಪಷ್ಟಪಡಿಸಿದ್ದಾರೆ.
ಪರಿಸ್ಥಿತಿ ಉದ್ವಿಗ್ನಗೊಂಡಿರುವ ಹತ್ತರಗಿ ಸ್ಥಳಕ್ಕೆ ಭೇಟಿ ನೀಡಿ ಈ ಕುರಿತು ಮಾತನಾಡಿರುವ ಬೆಳಗಾವಿ ಎಸ್.ಪಿ ಭೀಮಾಶಂಕರ್ ಗುಳೇದ್, ಪ್ರತಿಭಟನೆ ವೇಳೆ ಕೆಲವು ವಾಹನಗಳ ಮೇಲೆ ಕಲ್ಲು ತೂರಿದ್ದಾರೆ ಹತ್ತರಗಿ ಕ್ರಾಸ್ ನಲ್ಲಿ ಕಲ್ಲು ತೂರಾಟದಿಂದ ಕೆಲವು ಸಿಬ್ಬಂದಿಗೆ ಗಾಯವಾಗಿದೆ. ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಡಲು ಮುಂದಾದಾಗ ಕೆಲವು ಕಿಡಗೇಡಿಗಳು ಕಲ್ಲು ತೂರಿದ್ದಾರೆ ಎಂದರು.
ಪ್ರತಿಭಟನಾರೈತರ ಮೇಲೆ ನಮ್ಮ ಪೊಲೀಸರು ಲಾಠಿಚಾರ್ಜ್ ಮಾಡಿಲ್ಲ ಕಲ್ಲು ತೂರಾಟ ಪ್ರಕರಣ ಸಂಬಂಧ ಯಾವುದೇ ಕೇಸ್ ದಾಲಾಗಿಲ್ಲ ಎಂದು ಎಸ್ ಪಿ ಭೀಮಾಶಂಕರ್ ಗುಲೇದ್ ತಿಳಿಸಿದರು.
Key words: Police, did not, lathicharge, farmers, Belgaum, SP







