ನೂರು ವರ್ಷಕ್ಕೂ ಹಳೆಯ ಮರಕ್ಕೆ ಕೊಡಲಿ ಪೆಟ್ಟು:  ಅಧಿಕಾರಿಗಳ ವಿರುದ್ದ ಆಕ್ರೋಶ, ಪ್ರತಿಭಟನೆ

ಮೈಸೂರು,ಜುಲೈ,7,2025 (www.justkannada.in): ನಗರದ  ನಂಜರಾಜ ಬಹದ್ದೂರ್ ಛತ್ರದ ಆವರಣದಲ್ಲಿರುವ ನೂರಕ್ಕೂ ಹೆಚ್ಚು ವರ್ಷದ ಹಳೆಯ ಮರದ ಸುತ್ತ ಇದ್ದ ಕಟ್ಟೆ ದುರಸ್ತಿಯ ನೆಪದಲ್ಲಿ  ಮರವನ್ನೇ ಕಡಿಯಲು  ಮೈಸೂರು ಮಹಾನಗರ ಪಾಲಿಕೆ ಅಧಿಕಾರಿಗಳು ಮುಂದಾಗಿದ್ದಾರೆ ಎಂದು ಆರೋಪಿಸಿ ಪರಿಸರ  ಪ್ರೇಮಿಗಳು ಹಾಗೂ ಕರ್ನಾಟಕ ಹಿತರಕ್ಷಣಾ ವೇದಿಕೆ ವತಿಯಿಂದ ಪ್ರತಿಭಟನೆ ನಡೆಯಿತು.

ಕತ್ತರಿಸಿದ ಮರದ ಬೇರನ್ನು ಹಿಡಿದು ಧರಣಿ ನಡೆಸಿದ ಪ್ರತಿಭಟನಾಕಾರರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಮಾತನಾಡಿದ ಕರ್ನಾಟಕ ಹಿತರಕ್ಷಣಾ ವೇದಿಕೆ ಅಧ್ಯಕ್ಷ ವಿನಯ್ ಕುಮಾರ್,   ಅಭಿವೃದ್ಧಿ ನೆಪದಲ್ಲಿ ಇತಿಹಾಸ  ಇರುವ  ಬೃಹದಾಕಾರ  ಮರದ  ಬುಡಕ್ಕೆ ಕೊಡಲಿ ಪೆಟ್ಟು  ಮಾಡಿರುವುದು ಅತ್ಯಂತ ಬೇಸರದ ಸಂಗತಿ,  ಈ ಬಗ್ಗೆ ಕೇಳಲು ಹೋದರೆ ಅಧಿಕಾರಿಗಳು  ಬೇಜವಾಬ್ದಾರಿ ಉತ್ತರ ನೀಡಿದ್ದಾರೆ,  ಇದು ಪಾರಂಪರಿಕ ಕಟ್ಟಡವಾಗಿದ್ದು ಇದನ್ನು ಪಾರಂಪರಿಕ ವೃಕ್ಷ ಎಂದು ಘೋಷಿಸಬೇಕಿದೆ. ಜೊತೆಗೆ ಅನವಶ್ಯಕ ಕಾಮಗಾರಿಗಳನ್ನು ಕೈಬಿಟ್ಟು ಮರಗಳ ರಕ್ಷಣೆಗೆ ಅಧಿಕಾರಿಗಳು ಮುಂದಾಗಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಸಾಮಾಜಿಕ ಹೋರಾಟಗಾರ ವಿಕ್ರಮ ಅಯ್ಯಂಗಾರ್,  ಜೀವದಾರರ ರಕ್ತ ನಿಧಿ ಕೇಂದ್ರದ ಗಿರೀಶ್, ಯುವ ಮುಖಂಡರಾದ ಹರೀಶ್ ಗೌಡ, ಮಂಜುನಾಥ್ ಗೌಡ , ಸಂದೇಶ್, ರವಿಚಂದ್ರ,  ಎಸ್ ಎನ್ ರಾಜೇಶ್,  ನೀತು,  ಸಂತೋಷ್,   ಹಾಗೂ ಇನ್ನಿತರರು ಪಾಲ್ಗೊಂಡಿದ್ದರು.vtu

Key words: hundred years, old tree, cutting, Mysore, Protest