Saturday, August 15, 2026

BDA Apartments

Home Front Page ಜ್ಯೂಬಿಲಿಯೆಂಟ್ ವಿರುದ್ಧ ಹರ್ಷಗುಪ್ತಾ ತನಿಖೆಗೆ ಸಹಕರಿಸದ ಅಧಿಕಾರಿಗಳು: ಶಾಸಕ ಹರ್ಷವರ್ಧನ್ ಆಕ್ರೋಶ

ಜ್ಯೂಬಿಲಿಯೆಂಟ್ ವಿರುದ್ಧ ಹರ್ಷಗುಪ್ತಾ ತನಿಖೆಗೆ ಸಹಕರಿಸದ ಅಧಿಕಾರಿಗಳು: ಶಾಸಕ ಹರ್ಷವರ್ಧನ್ ಆಕ್ರೋಶ

ಮೈಸೂರು, ಮೇ 05, 2020 (www.justkannada.in): ಜ್ಯೂಬಿಲಿಯೆಂಟ್ ಕಾರ್ಖಾನೆ ತನಿಖೆ ವಿಚಾರದಲ್ಲಿ ನಂಜನಗೂಡಿನ ಬಿಜೆಪಿ ಶಾಸಕ ಹರ್ಷವರ್ಧನ್ ತಮ್ಮದೇ ಸರ್ಕಾರದ ವಿರುದ್ಧ ಅಸಮಾಧಾನ ಹೊರ ಹಾಕಿದ್ದಾರೆ.

ತನಿಖೆ ಹಾಗೂ ಹೋರಾಟದ ವಿಚಾರದಲ್ಲಿ ಸರ್ಕಾರದಿಂದ ನನಗೆ ಬೆಂಬಲ ಸಿಕ್ಕಿಲ್ಲ. ಜ್ಯೂಬಿಲಿಯೆಂಟ್ ವಿಚಾರದಲ್ಲಿ ಸತ್ಯ ಎಲ್ಲರಿಗೂ ಗೊತ್ತಿದೆ. ಆದರೆ ಹೇಳಲು ಯಾರಿಗೂ ಧೈರ್ಯವಿಲ್ಲ. ಕಂಪನಿಯದ್ದು ತಪ್ಪೇ ಇಲ್ಲ ಎಂಬಂತೆ ಬಿಂಬಿಸಿ ನನ್ನನ್ನು ತಪ್ಪಿತಸ್ಥನಂತೆ ಮಾಡಲಾಗಿದೆ ಎಂದು ದೂರಿದ್ದಾರೆ.

ಐಎಎಸ್ ಅಧಿಕಾರಿ ಹರ್ಷಗುಪ್ತ ಅವರಿಂದ ತನಿಖೆ ನಡೆಯಬೇಕೆಂದು ಒತ್ತಾಯಿಸಿದ್ದೆ. ನೇಮಕ ಪ್ರಕ್ರಿಯೆ ವಿಳಂಬವಾಗಿದ್ದಕ್ಕೆ ತನಿಖೆ ಹಾದಿ ತಪ್ಪಿದೆ ಎಂದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೆಲವು ಇಲಾಖೆಗಳು ಹರ್ಷಗುಪ್ತಾ ಅವರಿಗೆ ಸಹಕಾರ ನೀಡಿಲ್ಲ ಎಂದು ಆರೋಪಿಸಿದ್ದಾರೆ.