Sunday, October 4, 2026

BDA Apartments

Home Front Page ಎಸ್.ಟಿ ನಿಗಮದ ಅಧಿಕಾರಿ ಆತ್ಮಹತ್ಯೆ ಕೇಸ್: ಸದ್ಯಕ್ಕೆ ಸಿಬಿಐಗೆ ವಹಿಸಲ್ಲ- ಗೃಹ ಸಚಿವ ಡಾ.ಜಿ.ಪರಮೇಶ್ವರ್.

ಎಸ್.ಟಿ ನಿಗಮದ ಅಧಿಕಾರಿ ಆತ್ಮಹತ್ಯೆ ಕೇಸ್: ಸದ್ಯಕ್ಕೆ ಸಿಬಿಐಗೆ ವಹಿಸಲ್ಲ- ಗೃಹ ಸಚಿವ ಡಾ.ಜಿ.ಪರಮೇಶ್ವರ್.

ಬೆಂಗಳೂರು,ಮೇ,31,2024 (www.justkannada.in):  ಎಸ್.ಟಿ  ಅಭಿವೃದ್ದಿ ನಿಗಮದ ಅಧಿಕಾರಿ ಚಂದ್ರಶೇಖರ್ ಆತ್ಮಹತ್ಯೆ, ಅಕ್ರಮ ಹಣ ವರ್ಗಾವಣೆ ಆರೋಪ ಪ್ರಕರಣವನ್ನು ಸದ್ಯಕ್ಕೆ ಸಿಬಿಐಗೆ ವಹಿಸುವುದಿಲ್ಲ ಎಂದು ಗೃಹ ಸಚಿವ ಜಿ. ಪರಮೇಶ್ವರ್ ಸ್ಪಷ್ಟಪಡಿಸಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಗೃಹ ಸಚಿವ ಡಾ.ಜಿ.ಪರಮೇಶ್ವರ್,   ಪ್ರಕರಣ ಸಂಬಂಧ ಸಿಐಡಿಯವರು ತನಿಖೆ ಆರಂಭಿಸಿದ್ದಾರೆ. 100 ಕೋಟಿ ರೂ. ಅಧಿಕ ಅಕ್ರಮ ನಡೆದಿದೆಯೋ..? ಇಲ್ಲವೋ ಎಂಬುದು ಸಿಐಡಿ ತನಿಖೆಯಿಂದ ಗೊತ್ತಾಗಲಿದೆ ಎಂದು ತಿಳಿಸಿದರು.ಎಸ್.ಟಿ ನಿಗಮದ ಅಧಿಕಾರಿ ಆತ್ಮಹತ್ಯೆ ಕೇಸ್: ಸದ್ಯಕ್ಕೆ ಸಿಬಿಐಗೆ ವಹಿಸಲ್ಲ- ಗೃಹ ...

ಪ್ರಕರಣವನ್ನು ಸದ್ಯಕ್ಕೆ ಸಿಬಿಐಗೆ ವಹಿಸಲ್ಲ, ಅಂತಹ ಸಮಯ ಬಂದರೆ ಸಿಎಂ ಜೊತೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸಚಿವ ಪರಮೇಶ್ವರ್  ತಿಳಿಸಿದರು.

Key words: officer, suicide, case, Dr. G. Parameshwar.