‘’ಮಠದ ಮೂಲಕ ಸಂಘಟನೆಯಾಗದಿದ್ದರೆ ಸಿಎಂ ಆಗುತ್ತಿರಲಿಲ್ಲ’’ : ಸಿದ್ದರಾಮಯ್ಯ ವಿರುದ್ಧ ವಿಶ್ವನಾಥ್ ವಾಗ್ದಾಳಿ…!

ಮೈಸೂರು,ಡಿಸೆಂಬರ್,29,2020(www.justkannada.in) :  ಕುರುಬರನ್ನು ಒಗ್ಗೂಡಿಸಲು ಕನಕಪೀಠ ಕಟ್ಟಿದೆವು.  ಮಠ ಕಟ್ಟುವುದು ಅಷ್ಟು ಸುಲಭದ ಕೆಲಸ ಅಲ್ಲ. ಮಠದ ಮೂಲಕ ಸಮುದಾಯ ಸಂಘಟನೆ ಆಗದೇ ಹೋಗಿದ್ದರೆ ಸಿಎಂ ಆಗುತ್ತಿರಲಿಲ್ಲ ಎಂದು ಪರೋಕ್ಷವಾಗಿ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ವಿಧಾನ ಪರಿಷತ್ತು ಸದಸ್ಯ ಅಡಗೂರು ಎಚ್.ವಿಶ್ವನಾಥ್ ವಾಗ್ದಾಳಿ ನಡೆಸಿದ್ದಾರೆ.ಕುರುಬರ ಎಸ್‌ಟಿ ಹೋರಾಟ ಸಮಿತಿ ವಿಭಾಗೀಯ ಸಭೆಯಲ್ಲಿ ಮಾತನಾಡಿದ ಅವರು, ಮಠ ಸ್ಥಾಪನೆಯಿಂದಾಗಿ ಕುರುಬ ಸಮುದಾಯದವರು ಮುಖ್ಯಮಂತ್ರಿಯಾಗಲು ಸಾಧ್ಯವಾಯಿತು. ಮಠದ ಮೂಲಕ ಸಮುದಾಯ ಸಂಘಟನೆ ಆಗದೇ ಹೋಗಿದ್ದರೆ ಸಿಎಂ ಆಗುತ್ತಿರಲಿಲ್ಲ ಎಂದಿದ್ದಾರೆ.

ಕುರುಬ ಸಮುದಾಯದ ಅಸ್ಮಿತೆಗಾಗಿ ಹೋರಾಟ ರೂಪಿಸುತ್ತಿದ್ದೇವೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ನಮಗೆ ಸಿಗಬೇಕಾದ ಸೌಕರ್ಯ ನೀಡಬೇಕೆಂದು ಕೇಳುತ್ತಿದ್ದೇವೆ.  ಇದು ಯಾರ ಪರವೂ ಅಲ್ಲ, ವಿರುದ್ಧವೂ ಅಲ್ಲ ಎಂದು ಹೇಳಿದ್ದಾರೆ.Number,Monastery,way,not,organization,CM would,not,Vishwanath,barrage,against,Siddaramaiah

ಕುರುಬರು ಅತ್ಯಂತ ವಿಶಿಷ್ಟ ಸಂಸ್ಕೃತಿ ಹೊಂದಿದ್ದಾರೆ. ಜಗತ್ತಿನಾದ್ಯಂತ ಬೇರೆ, ಬೇರೆ ಹೆಸರಿನಲ್ಲಿ ಇದ್ದೇವೆ. ಸಮುದಾಯದ ಅಸ್ಮಿತೆಗಾಗಿ ಹೋರಾಟ ರೂಪಿಸುತ್ತಿದ್ದು, ಈ ಹಿಂದೆಯೂ ಹಲವಾರು ಹೋರಾಟ, ಸಾಧನೆ ಮಾಡಿದ್ದೇವೆ ಎಂದಿದ್ದಾರೆ.

key words : Number-Monastery-way-not-organization-CM would-not-Vishwanath-barrage-against-Siddaramaiah