ರಾಜ್ಯದಲ್ಲಿ ಅಳಿವಿನಂಚಿನಲ್ಲಿರುವಂತಹ ಸಸ್ಯ ಸ್ತನಿಗಳ ಸಂಖ್ಯೆ ದ್ವಿಗುಣ.

ಬೆಂಗಳೂರು, ಜುಲೈ 16, 2021 (www.justkannada.in): ಕರ್ನಾಟಕ ಜೀವವೈವಿಧ್ಯ ಮಂಡಳಿ ಅರಣ್ಯ ಸಚಿವರಿಗೆ ಸಲ್ಲಿಸಿರುವ ವರದಿಯೊಂದರ ಪ್ರಕಾರ, ಕರ್ನಾಟಕದಲ್ಲಿ 2021ರಿಂದ ಅಳವಿನಂಚಿನಲ್ಲಿರುವಂತಹ ಒಟ್ಟು 16 ಸಸ್ಯಗಳ ಸಂಖ್ಯೆ 32ಕ್ಕೆ ಏರಿಕೆಯಾಗಿದೆ.jk

ಇದೇ ರೀತಿ 40 ಸಸ್ತನಿಗಳು ಸಹ ಅಳಿವಿನಂಚಿನ ಅಪಾಯವನ್ನು ಎದುರಿಸುತ್ತಿವೆ. ಕೇಂದ್ರ ಪರಿಸರ ಸಚಿವಾಲಯ 2010ರಲ್ಲಿ ಅಳಿವಿನಂಚಿನಲ್ಲಿರುವ ಸಸ್ಯ ಮತ್ತು ಪ್ರಾಣಿಸಂಕುಲದ ಪಟ್ಟಿಯನ್ನು ರಚಿಸಿತ್ತು. ಮಂಡಳಿಯ ಪ್ರಕಾರ, 2020-21ರಲ್ಲಿ ಈ ಪಟ್ಟಿಯನ್ನು ಪುನರ್‌ ಮನನ ಮಾಡಲು ತಜ್ಞರ ಸಮಿತಿಯೊಂದನ್ನು ರಚಿಸಲಾಯಿತು. ಈ ಪರಿಷ್ಕೃತ ಪಟ್ಟಿಯನ್ನು ರಾಷ್ಟ್ರೀಯ ಜೀವವೈವಿಧ್ಯ ಮಂಡಳಿಯೂ ಒಳಗೊಂಡಂತೆ ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗಿದೆ.

ವರದಿಯ ಪ್ರಕಾರ ಅಳಿವಿನಂಚಿನಲ್ಲಿರುವ ಸಸ್ಯಸಂಕುಲದ ಪಟ್ಟಿಗೆ ಹೊಸದಾಗಿ 16 ಸಸ್ಯಗಳನ್ನು ಸೇರಿಸಲಾಗಿದೆ. ಗಂಭೀರವಾಗಿ ಅಳಿವಿನಂಚಿನಲ್ಲಿರುವಂತಹ 40 ಸಸ್ತನಿಗಳನ್ನೂ ಸಹ ಮಂಡಳಿ ವರ್ಗೀಕರಿಸಿದ್ದು, ಇದರಲ್ಲಿ 23 ಪಕ್ಷಿಗಳು, 26 ಸರಿಸೃಪಗಳು, 21 ಉಭಯಚರಗಳು, 53 ಸಿಹಿನೀರು ಮೀನುಗಳು ಹಾಗೂ 35 ಉಪ್ಪುನೀರಿನ ಮೀನುಗಳು ಸೇರಿವೆಯಂತೆ!

ಮಂಡಳಿ ರಚಿಸಿರುವ ತಜ್ಞರ ಸಮಿತಿಯು ಕರ್ನಾಟಕದಲ್ಲಿ ಅಳಿವಿನಂಚಿನಲ್ಲಿರುವ ಅಕಶೇರುಕಗಳನ್ನು (ಬೆನ್ನೆಲುಬಿಲ್ಲದ ಪ್ರಾಣಿಗಳು – invertebrates) ಗುರುತಿಸುವ ಅಗತ್ಯವಿಲ್ಲವಂತೆ!

ಮಂಡಳಿ ಅಧ್ಯಕ್ಷ ಅನಂತ್ ಹೆಗ್ಡೆ ಆಶೀಸರ್ ಅವರ ಪ್ರಕಾರ, ಈ ಅಳಿವಿನಂಚಿನಲ್ಲಿರುವಂತಹ ಸಸ್ಯ ಹಾಗೂ ಪ್ರಾಣಿಸಂಕುಲದ ತಳಿಗಳನ್ನು ಎಲ್ಲಾ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳಿಗೂ ನೀಡಬೇಕು. “ಅರಣ್ಯ ಸಂರಕ್ಷಣಾ ಪ್ರಯತ್ನಗಳಲ್ಲಿ ಈ ತಳಿಗಳ ಉಳಿವಿಗೆ ಆದ್ಯತೆ ನೀಡಬೇಕು,” ಎನ್ನುವುದು ಅವರ ಅಭಿಪ್ರಾಯ.

ಅರಣ್ಯ ಸಚಿವ ಅರವಿಂದ ಲಿಂಬಾವಳಿ ಅವರಿಗೆ ಈ ವರದಿ ತಲುಪಿದ್ದು, ಇಂತಹ ಅಳಿವಿನಂಚಿನಲ್ಲಿರುವಂತಹ ಸಸ್ಯ ಹಾಗೂ ಪ್ರಾಣಿ ಸಂಕುಲವನ್ನು ರಕ್ಷಿಸಲು ಇಲಾಖೆ ಸದಾ ಬದ್ಧವಾಗಿರುತ್ತದೆ ಎಂದಿದ್ದಾರೆ.

ಸುದ್ದಿ ಮೂಲ: ಡೆಕ್ಕನ್ ಹೆರಾಲ್ಡ್

Key words: number – endangered -plant  – state – more than-double.