ಯಾವುದೇ ಕಾರಣಕ್ಕೂ ಕನ್ನಡ ಶಾಲೆಯನ್ನ ಕೆಡುವಲು ಬಿಡಲ್ಲ- ಮಾಜಿ ಮೇಯರ್ ಪುರುಷೋತ್ತಮ್

ಮೈಸೂರು, ಜೂನ್,24,2021(www.justkannada.in): ಮೈಸೂರಿನ ಎನ್.ಟಿ.ಎಂ ಶಾಲೆ ವಿವಾದಕ್ಕೆ ಸಂಬಂಧಿಸಿದಂತೆ ಯಾವುದೇ ಕಾರಣಕ್ಕೂ ಕನ್ನಡ ಶಾಲೆಯನ್ನ ಕೆಡುವಲು ಬಿಡಲ್ಲ ಎಂದು ಮಾಜಿ ಮೇಯರ್ ಪುರುಷೋತ್ತಮ್ ಹೇಳಿದರು.jk

ದಲಿತ ಸಂಘಟನೆಗಳ ಒಕ್ಕೂಟದ ವತಿಯಿಂದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ನಡೆಸಲಾಯಿತು. ಈ ವೇಳೆ ಮಾತನಾಡಿದ ಮಾಜಿ ಮೇಯರ್ ಪುರುಷೋತ್ತಮ್ ,ಒಂದು ಕನ್ನಡ ಶಾಲೆಯನ್ನು ಕೆಡವಿ ಸ್ಮಾರಕ ನಿರ್ಮಿಸಬೇಕೆನ್ನುವುದು ಸರಿಯಲ್ಲ. ಅದರ ಬದಲು ಬೇರೆ ಕಡೆ ಸ್ಮಾರಕ ನಿರ್ಮಾಣ ಮಾಡಲಿ. ಅಂಬೇಡ್ಕರ್ ಸ್ಮಾರಕದೆದುರು ಭವ್ಯವಾದ ಮತ್ತೊಂದು ಸ್ಮಾರಕ ಮಾಡಬೇಕೆನ್ನುವ ಹುನ್ನಾರ ನಡೆಯುತ್ತಿದೆ.

ನಮ್ಮ ಹೋರಾಟ ಸ್ಮಾರಕದ ವಿರುದ್ಧವಲ್ಲ ಕನ್ನಡ ಶಾಲೆಯನ್ನ ಉಳಿಸಿಕೊಳ್ಳಬೇಕು ಎಂಬುದಷ್ಟೆ. ಒಂದು ವೇಳೆ ಶಾಲೆಯನ್ನ ಕೆಡವಿ ಸ್ಮಾರಕ ನಿರ್ಮಾಣ ಮಾಡಲು ಮುಂದಾದರೆ ದೊಡ್ಡಮಟ್ಟದ ಹೋರಾಟ ಅನಿವಾರ್ಯ ಎಂದು ಮಾಜಿ ಮೇಯರ್ ಪುರುಷೋತ್ತಮ್ ಎಚ್ಚರಿಕೆ ನೀಡಿದರು.

Key words: NTM school -controversy -Kannada school – mysore- Former Mayor- Purushottam