Saturday, September 19, 2026

BDA Apartments

ಮೈಸೂರಿನಲ್ಲಿ ನೃಪತುಂಗ ಕನ್ನಡ ವಿಜ್ಞಾನ ಮತ್ತು ವಾಣಿಜ್ಯ ಕಾಲೇಜು ಉದ್ಘಾಟನೆ: ...
Home Front Page ಮೈಸೂರಿನಲ್ಲಿ ನೃಪತುಂಗ ಕನ್ನಡ ವಿಜ್ಞಾನ ಮತ್ತು ವಾಣಿಜ್ಯ ಕಾಲೇಜು ಉದ್ಘಾಟನೆ: ‘ನೋ ಪ್ರೆಸ್ ಮೀಟ್’ ಎಂದು...

ಮೈಸೂರಿನಲ್ಲಿ ನೃಪತುಂಗ ಕನ್ನಡ ವಿಜ್ಞಾನ ಮತ್ತು ವಾಣಿಜ್ಯ ಕಾಲೇಜು ಉದ್ಘಾಟನೆ: ‘ನೋ ಪ್ರೆಸ್ ಮೀಟ್’ ಎಂದು ತೆರಳಿದ ಸಿದ್ದರಾಮಯ್ಯ..

ಮೈಸೂರು,ಮೇ,22,2019(www.justkannada.in):  ಮೈಸೂರಿನಲ್ಲಿ ನೃಪತುಂಗ ಕನ್ನಡ ವಿಜ್ಞಾನ ಮತ್ತು ವಾಣಿಜ್ಯ ಕಾಲೇಜು ಕಟ್ಟಡವನ್ನ  ಮಾಜಿ ಸಿಎಂ ಸಿದ್ದರಾಮಯ್ಯ ಉದ್ಘಾಟನೆ ಮಾಡಿದರು.

ಮೈಸೂರಿನ ರಾಮಕೃಷ್ಣ ನಗರದಲ್ಲಿರುವ ನೃಪತುಂಗ ಕನ್ನಡ ವಿಜ್ಞಾನ ಮತ್ತು ವಾಣಿಜ್ಯ ಕಾಲೇಜು ಕಟ್ಟಡವನ್ನ ಸಿದ್ದರಾಮಯ್ಯ ಉದ್ಘಾಟನೆ ಮಾಡಿ ಪರಿಶೀಲನೆ ನಡೆಸಿದರು.  ಮಾಜಿ ಸಿಎಂ ಸಿದ್ದರಾಮಯ್ಯ ಗೆ ಮಾಜಿ ಸಚಿವ ಹೆಚ್.ಸಿ ಮಹದೇವಪ್ಪ, ಪ್ರಗತಿಪರ ಚಿಂತಕ ಪ.ಮಲ್ಲೇಶ್ ಸಾಥ್ ನೀಡಿದರು.

ನೋ ಪ್ರೆಸ್ ಮೀಟ್ ಎಂದ ಸಿದ್ದರಾಮಯ್ಯ..

ಕಾಲೇಜು ಉದ್ಘಾಟನಾ ಕಾರ್ಯಕ್ರಮಕ್ಕೆ ಆಗಮಿಸಿದ್ದ ಮಾಜಿ ಸಿಎಂ ಸಿದ್ದರಾಮಯ್ಯ, ಈ ವೇಳೆ ಮಾದ್ಯಮಗಳಿಗೆ ಪ್ರತಿಕ್ರಿಯೆ ನೀಡದೆ ಕಾರ್ಯಕ್ರಮಕ್ಕೆ‌ ತೆರಳಿದ ಪ್ರಸಂಗ ನಡೆಯಿತು. ಪ್ರತಿ ಸಾರಿ  ಮಾಧ್ಯಮಗಳಿಗೆ ಪ್ರತಿಕ್ರಿಯಿಸುತ್ತಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಇಂದು ಮಾಧ್ಯಮಗಳ ಜತೆ ಮಾತನಾಡದೇ ನೋ ಪ್ರೆಸ್ ಮೀಟ್ ಎಂದು ತೆರಳಿದರು.

ಇನ್ನು ನಿನ್ನೆ ರೋಷನ್ ಬೇಗ್  ನೀಡಿರುವ ಹೇಳಿಕೆಯಿಂದ ಸಿದ್ದರಾಮಯ್ಯ ವಿಚಲಿತರಾಗಿದ್ದು , ಹೀಗಾಗಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸದೆ ತೆರಳಿದ್ದಾರೆ ಎನ್ನಲಾಗಿದೆ.

Key words: Nrupatunga Kannada Science & Commerce College inaugurated by Siddaramaiah in Mysore

#mysore #siddaramaiah #college #inaugurated