ಸಿಎಂ ಆಗಲು ಈಗ ಅವಕಾಶವಿಲ್ಲ: ಮುಂದೆ ನೋಡೋಣ -ಹೀಗಂದಿದ್ದು ಯಾರು ಗೊತ್ತೆ….?

ಬೆಂಗಳೂರು.ಮೇ,9,2019(www.justkannada.in) ಸಿದ್ದರಾಮಯ್ಯ ಮತ್ತೆ ಸಿಎಂ ಆಗಬೇಕೆನ್ನುವ ಕೂಗು ಕೇಳಿ ಬಂದಿರುವ ಬೆನ್ನಲ್ಲೆ ಸಿಎಂ ಆಕಾಂಕ್ಷಿ ರೇಸ್ ನಲ್ಲಿ ಇದೀಗ ಮತ್ತೊಬ್ಬರು ಸೇರ್ಪಡೆಗೊಂಡಿದ್ದಾರೆ.   ಮುಖ್ಯಮಂತ್ರಿ ಆಗಲು ಈಗ ಅವಕಾಶವಿಲ್ಲ. ಮುಂದೆ ನೋಡೋಣ ಎಂದು ಅರಣ್ಯ ಸಚಿವ  ಸತೀಶ್ ಜಾರಕಿಹೊಳಿ ಹೇಳಿಕೆ ನೀಡಿದ್ದಾರೆ.

ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅಸಮಾಧಾನ ಕುರಿತು ಮಾಧ್ಯಮದ ಜತೆ ಮಾತನಾಡಿದ ಸಚಿವ ಸತೀಶ್ ಜಾರಕಿಹೊಳಿ, ರಮೇಶ್ ಜಾರಕಿಹೊಳಿ ಅವರ ಜತೆ ಪಕ್ಷದ ವರಿಷ್ಟರು ಮಾತನಾಡಿ ಸಂದಾನ ಮಾಡುತ್ತಾರೆ. ಅಸಮಾಧಾನ ಬಗೆಹರಿಸಲು ಯತ್ನಿಸುತ್ತಾರೆ ಎಂದು ತಿಳಿಸಿದರು.

ಹಾಗಯೇ ಕಾಂಗ್ರೆಸ್ ಪಕ್ಷಕ್ಕೆ ರಮೇಶ್ ಜಾರಕಿಹೊಳಿ ರಾಜೀನಾಮೆ ಕೊಡುವ ಕುರಿತು ಪ್ರತಿಕ್ರಿಯಿಸಿದ ಸತೀಶ್ ಜಾರಕಿಹೊಳಿ,  ರಾಜೀನಾಮೆ ಕೊಡ್ತೀನಿ ಅಂದಿದ್ದು ಅವರು. ಹೀಗಾಗಿ ಈ ಬಗ್ಗೆ ಅವರನ್ನೇ ಕೇಳಿ ಎಂದರು.

Key words: Now -there is- no chance – become- CM-minister