ಶಾಸಕರು ಮಾರಾಟದ ವಸ್ತು ಅಲ್ಲ: ಅಲ್ಪ ಸಂಖ್ಯಾತರಿಗೆ ಕಾಂಗ್ರೆಸ್ ನಲ್ಲಿ ಬೆಲೆ ಇಲ್ಲ- ಅಸಮಾಧಾನ ವ್ಯಕ್ತಪಡಿಸಿದ ಶಾಸಕ ತನ್ವೀರ್ ಸೇಠ್..

ಮೈಸೂರು,ಜು,2,2019(www.justkannada.in):  ಅಲ್ಪಸಂಖ್ಯಾತರಿಗೆ ಕಾಂಗ್ರೆಸ್ ನಲ್ಲಿ ಬೆಲೆ ಇಲ್ಲ. ಬಿಜೆಪಿಯವರು  ನಮಗೆ ಬೆಲೆ ಕಟ್ಟಲ್ಲ. ಇಂತಹ ಸಂದಿಗ್ಧ ಪರಿಸ್ಥಿತಿ ಅಲ್ಪಸಂಖ್ಯಾತ ಜನಪ್ರತಿನಿಧಿಗಳಿಗಿದೆ ಎಂದು ಶಾಸಕ ತನ್ವೀರ್ ಸೇಠ್ ಅಸಮಾಧಾನ ಹೊರ ಹಾಕಿದ್ದಾರೆ.

ಮೈಸೂರಿನಲ್ಲಿ ಇಂದು ಮಾತನಾಡಿದ ಶಾಸಕ ತನ್ವೀರ್ ಸೇಠ್, ಅಪರೇಷನ್, ರಿವರ್ಸ್ ಅಪರೇಷನ್ ಎರಡು ತಪ್ಪು. ಶಾಸಕರೇನು ಮಾರಾಟದ ವಸ್ತುಗಳಲ್ಲ. ಮಾರಾಟದ ವಸ್ತುಗಳಾಗಿ ಹೋಗೋದು ಸರಿಯಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಇಬ್ಬರು ಶಾಸಕರು ರಾಜೀನಾಮೆ ಕುರಿತು ಪ್ರತಿಕ್ರಿಯಿಸಿದ ತನ್ವೀರ್ ಸೇಠ್, ಇಬ್ಬರು ಶಾಸಕರು ವೈಯಕ್ತಿಕ ಕಾರಣಕ್ಕೆ ರಾಜೀನಾಮೆ ನೀಡಿದ್ದಾರೆ. ಮೈತ್ರಿ ಸರ್ಕಾರದಲ್ಲಿ ಅಸಮಾಧಾನ  ಇರೋದು ಸತ್ಯ. ಹಾಗಂತ ಸಮ್ಮಿಶ್ರ ಸರ್ಕಾರ ಬೀಳುತ್ತೆ ಎನ್ನೊದು ತಪ್ಪು.  ಕೇವಲ ಇಬ್ಬರ ರಾಜೀನಾಮೆಯಿಂದ ಸರ್ಕಾರವನ್ನು ಬೀಳಿಸೋದು ಸಾಧ್ಯವಿಲ್ಲ ಎಂದರು.

ಇನ್ನು ತಮಗೆ ಸಚಿವ ಸ್ಥಾನ ನೀಡಿದರೇ ಸಮರ್ಥವಾಗಿ ನಿಭಾಯಿಸುತ್ತೇನೆ. ಸಚಿವ ಸ್ಥಾನ ನೀಡದಿದ್ದರೇ ಜನರ  ಸೇವೆ ಮಾಡುತ್ತೇನೆ ಎಂದು ತಿಳಿಸಿದರು.

Key words: novalue- minority community- Congress –tanveer sait