ಆಸ್ಟ್ರೇಲಿಯನ್ ಗ್ರ್ಯಾನ್ ಸ್ಲ್ಯಾಮ್’ಗೆ ಮುತ್ತಿಟ್ಟ ನೋವಾಕ್ ಜೊಕೊವಿಚ್

ಮೆಲ್ಬೊರ್ನ್, ಫೆಬ್ರವರಿ 03, 2020 (www.justkannada.in): ಗ್ರ್ಯಾನ್ ಸ್ಲ್ಯಾಮ್ ಆಸ್ಟ್ರೇಲಿಯನ್ ಓಪನ್ ಟೂರ್ನಿಯನ್ನು ಗೆಲ್ಲುವ ಮೂಲಕ ಸರ್ಬಿಯಾದ ಸ್ಟಾರ್ ಆಟಗಾರ ನೋವಾಕ್ ಜೊಕೊವಿಚ್ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.

ಪುರುಷರ ಸಿಂಗಲ್ಸ್ ಪಂದ್ಯದಲ್ಲಿ ಜೊಕೊ ಭರ್ಜರಿ ಪ್ರದರ್ಶನ ನೀಡಿ ಈ ಸಾಧನೆ ಮಾಡಿದರು. ಈ ಮೂಲಕ ಎಂಟನೇ ಬಾರಿಗೆ ನೋವಾಕ್ ಟೂರ್ನಿಯ ಟ್ರೋಫಿ ಎತ್ತಿ ಸಂಭ್ರಮಿಸಿದರು.

ಪ್ರಶಸ್ತಿ ಸುತ್ತಿನ ಕಾದಾಟದಲ್ಲಿ ಜೊಕೊ 6-4, 4-6, 2-6, 6-3, 6-4 ಆಸ್ಟ್ರೀಯಾದ ಡೋಮಿನಿಕ್ ಥಿಮ್ ಅವರನ್ನು ಸುಮಾರು ನಾಲ್ಕು ಗಂಟೆ ನಡೆದ ಪಂದ್ಯದಲ್ಲಿ ಮಣಿಸಿದರು.