ನಟೋರಿಯಸ್ ಮವೋವಾದಿ ಮಡ್ವಿ ಹಿಡ್ಮಾ ಸೇರಿ 6 ಮಂದಿ ನಕ್ಸಲರು ಎನ್ ಕೌಂಟರ್ ಗೆ ಬಲಿ

ಮಾರೇಡುಮಿಲ್ಲಿ,ನವಂಬರ್,18,2025 (www.justkannada.in):  ಭದ್ರತಾ ಪಡೆಗಳು ನಡೆಸಿದ ಎನ್ ಕೌಂಟರ್ ಗೆ ನಟೋರಿಯಸ್ ಮವೋವಾದಿ ಮಡ್ವಿ ಹಿಡ್ಮಾ ಸೇರಿದಂತೆ 6 ಮಂದಿ ಬಲಿಯಾಗಿದ್ದಾರೆ.

ಛತ್ತೀಸ್ಗಢ-ಆಂಧ್ರಪ್ರದೇಶ ಗಡಿಯಲ್ಲಿ ಭದ್ರತಾ ಪಡೆಗಳು ಹಾಗೂ ನಕ್ಸಲರ ನಡುವೆ ಗುಂಡಿನ ಚಕಮಕಿ ನಡೆಯುತ್ತಿದ್ದು, ಛತ್ತೀಸ್ ಗಢಕ್ಕೆ ಪರಾರಿಯಾಗುತ್ತಿದ್ದ  ನಕ್ಸಲೀಯ ಹಿಡ್ಮಾ ಸೇರಿ 6 ಮಂದಿ ನಕ್ಸಲಿಯರನ್ನ ಹತ್ಯೆ ಮಾಡಲಾಗಿದೆ ಎಂದು ಮಾಹಿತಿ ಲಭ್ಯವಾಗಿದೆ.

ಮಾರೇಡುಮಿಲ್ಲಿ ಪ್ರದೇಶದಲ್ಲಿ ಬೆಳಿಗ್ಗೆ 6 ರಿಂದ 7 ಗಂಟೆಯ ನಡುವೆ ಪೊಲೀಸರು ಮತ್ತು ಮಾವೋವಾದಿಗಳ ನಡುವೆ ಗುಂಡಿನ ಚಕಮಕಿ ನಡೆದಿದೆ.  ಗುಂಡಿನ ಚಕಮಕಿಯಲ್ಲಿ ಆರು ಮಾವೋವಾದಿಗಳು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಡ್ವಿ ಹಿಡ್ಮಾ 2010ರ ದಾಂತೆವಾಡ ನಕ್ಸಲ್ ದಾಳಿಯಲ್ಲಿ ಭಾಗಿಯಾಗಿದ್ದ. 26  ಶಸ್ತ್ರಸಜ್ಜಿತ ದಾಳಿಯಲ್ಲಿ ಮಡ್ವಿ ಹಿಡ್ಮಾ ಪಾಲ್ಗೊಂಡಿದ್ದನು. 2021 ರ ಏಪ್ರಿಲ್ ನಲ್ಲಿ ಛತ್ತೀಸ್ ಗಢದಲ್ಲಿ 22 ಭದ್ರತಾ ಸಿಬ್ಬಂದಿ ಸಾವನ್ನಪ್ಪಿದ ದಾಳಿಯಲ್ಲಿ ಮಾವೋವಾದಿ ನಾಯಕ ಪ್ರಮುಖ ಶಂಕಿತನಾಗಿದ್ದನು ಎನ್ನಲಾಗಿದೆ.

Key words: Notorious, Madvi Hidma, 6 Naxals,  encounter