ಕೆಪಿಎಸ್ ಸಿಯಿಂದ ‘ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ’ ಹುದ್ದೆಗಳಿಗೆ ಅಧಿಸೂಚನೆ…

ಬೆಂಗಳೂರು,ಅಕ್ಟೋಬರ್, 15,2020(www.justkannada.in): ಕರ್ನಾಟಕ ಲೋಕಸೇವಾ ಆಯೋಗವು (KPSC)  ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ (Assistant conservator of forest) ಹುದ್ದೆಗಳಿಗೆ ಇದೀಗ ಅಧಿಸೂಚನೆ ಪ್ರಕಟಿಸಿದೆ.

ಕರ್ನಾಟಕ ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆಯಲ್ಲಿ ಖಾಲಿ ಇರುವ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಗ್ರೂಪ್ ‘ಎ’ ವೃಂದದ ಬಿ.ಎಸ್ಸಿ. ಫಾರೆಸ್ಟ್ರಿ ವಿಷಯದಲ್ಲಿ ಪದವಿ ಹೊಂದಿದವರಿಂದ 8 ಹುದ್ದೆಗಳು ಹಾಗೂ  ಬಿ.ಎಸ್ಸಿ ಫಾರೆಸ್ಟ್ರಿ ವಿಷಯವಲ್ಲದ ವಿಜ್ಞಾನ/ ಇಂಜಿನಿಯರಿಂಗ್ ವಿಷಯದಲ್ಲಿ ಪದವಿ ಹೊಂದಿದವರಿಂದ 8 ಹುದ್ದೆಗಳು, ಒಟ್ಟು 16 ಹುದ್ದೆಗಳನ್ನು ಭರ್ತಿ ಮಾಡಲು ಕೆಪಿಎಸ್ ಸಿ ಅಧಿಸೂಚನೆ ಹೊರಡಿಸಿದೆ.notification-assistant-conservator-of-forest-officer-post-kpcc

ಅರ್ಹ ಅಭ್ಯರ್ಥಿಗಳು  ಆನ್ ಲೈನ್ ಮೂಲಕ ದಿನಾಂಕ 20-10-2020 ರಿಂದ 20-11-2020ರವರೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಶುಲ್ಕ ಪಾವತಿಸಲು ಕಡೆಯ ದಿನಾಂಕ 21-11-2020 ಆಗಿರುತ್ತದೆ. ಹೆಚ್ಚಿನ ವಿವರಗಳಿಗೆ ಆಯೋಗದ ವೆಬ್ ಸೈಟ್ http://kpsc.kar.nic.in ನೋಡಬಹುದು.

Key words: Notification -Assistant conservator of forest –Officer- post – KPCC