ಸಿದ್ದರಾಮಯ್ಯ ಮತ್ತು ದಿನೇಶ್ ಗುಂಡೂರಾವ್ ವಿರುದ್ದ ವಾಗ್ದಾಳಿ ನಡೆಸಿದ ಮಾಜಿ ಸಚಿವ ರೋಷನ್ ಬೇಗ್ ಗೆ ನೋಟೀಸ್…

0
332

ಬೆಂಗಳೂರು,ಮೇ21,2019(www.justkannada.in):  ತಮ್ಮ ಪಕ್ಷದ ನಾಯಕರಾದ  ದಿನೇಶ್ ಗುಂಡೂರಾವ್ ಹಾಗೂ ಮಾಜಿ ಸಿಎಂಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ  ಮಾಜಿ ಸಚಿವ ರೋಷನ್ ಬೇಗ್ ಗೆ ಕಾಂಗ್ರೇಸ್ ಪಕ್ಷದಿಂದ ನೋಟೀಸ್ ಜಾರಿಗೊಳಿಸಲಾಗಿದೆ.

ಕೆಪಿಸಿಸಿ ವತಿಯಿಂದ ನೋಟೀಸ್ ಜಾರಿ ಮಾಡಲಾಗಿದೆ. ಪಕ್ಷದ ನಾಯಕರ ವಿರುದ್ದ ನೀಡಿರುವ ಹೇಳಿಕೆ ಕುರಿತು ಐದು ದಿನಗಳಲ್ಲಿ ಉತ್ತರಿಸುವಂತೆ ರೋಷನ್ ಬೇಗ್ ಅವರಿಗೆ ಕಾಲಾವಕಾಶ ನೀಡಲಾಗಿದೆ.  ಪಕ್ಷದ ತತ್ವ ಸಿದ್ಧಾಂತದ ವಿರುದ್ದವಾಗಿ ನಡೆದುಕೊಂಡಿದ್ದೀರಿ. ಪಕ್ಷದ ವಿರುದ್ದ ಹೇಳಿಕೆ ನೀಡಿದ್ದೀರಿ. ನಿಮ್ಮ ಮೇಲೆ ಶಿಸ್ತು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಕೆಪಿಸಿಸಿ ಎಚ್ಚರಿಕೆ ನೀಡಿದೆ.

ಸಿದ್ದರಾಮಯ್ಯ ದುರಹಂಕಾರಿ ದಿನೇಶ್ ಗುಂಡೂರಾವ್ ಅಪ್ರಬುದ್ಧ ನಾಯಕ. ಕಾಂಗ್ರೆಸ್ ಫ್ಲಾಪ್ ಆಗಲು ಇಬ್ಬರು ನಾಯಕರೇ ಕಾರಣ ಎಂದು ಮಾಜಿ ಸಚಿವ ರೋಷನ್ ಬೇಗ್ ಕಿಡಿಕಾರಿದ್ದರು.

Key words: Notice to former minister Roshan Baig from KPCC .

#Politicalnews #Roshan Baig #KPCC .