Sunday, November 1, 2026

Dasara Wishes

Happy Dasara
Home Crime ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಿಂದ ನೋಟಿಸ್: ಕಚೇರಿ ಬಳಿಯೇ ಲಾರಿ ಮಾಲೀಕ ನೇಣಿಗೆ ಶರಣು

ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಿಂದ ನೋಟಿಸ್: ಕಚೇರಿ ಬಳಿಯೇ ಲಾರಿ ಮಾಲೀಕ ನೇಣಿಗೆ ಶರಣು

ರಾಮನಗರ,ಅಕ್ಟೋಬರ್,28,2024 (www.justkannada.in): ಕ್ರಷರ್ ನಿಂದ ಜಲ್ಲಿ ಸಾಗಿಸುತ್ತಿದ್ದ ಹಿನ್ನೆಲೆಯಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಿಂದ ನೋಟಿಸ್ ನೀಡಿದ್ದಕ್ಕೆ ಲಾರಿ ಮಾಲೀಕನೊಬ್ಬ ಇಲಾಖೆಯ ಕಚೇರಿ ಬಳಿಯೇ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ರಾಮನಗರದಲ್ಲಿ ಇಂದು ನಡೆದಿದೆ.

ರಾಮನಗರದಲ್ಲಿರುವ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಕಚೇರಿಯ ಬಳಿ ಈ ಘಟನೆ ನಡೆದಿದೆ.  ಮಾಗಡಿ ಮೂಲದ ನಾಗೇಶ್ (50) ಆತ್ಮಹತ್ಯೆಗೆ ಶರಣಾದ ಲಾರಿ ಚಾಲಕ.  ಲಾರಿ ಚಾಲಕ ನಾಗೇಶ್ ಕ್ರಷರ್ ನಿಂದ ಜಲ್ಲಿ ಸಾಗಿಸುತ್ತಿದ್ದ ಹಿನ್ನೆಲೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ನೋಟಿಸ್ ನೀಡಿತ್ತು.

ಇಂದು  ಮಧ್ಯಾಹ್ನ ಕಚೇರಿಗೆ ಬಂದಿದ್ದ ನಾಗೇಶ್ ನೋಟಿಸ್ ಬಗ್ಗೆ ಪ್ರಶ್ನಿಸಿದ್ದು, ನಿಯಮ ಉಲ್ಲಂಘನೆ ಆಗಿದೆ ಅದಕ್ಕೆ ಕಾರಣ ಕೊಡಿ ಎಂದು ಗಡಿ ಮತ್ತು ಭೂ ವಿಜ್ಞಾನ ಅಧಿಕಾರಿ ಹೇಳಿದ್ದಾರೆ. ಈ ವೇಳೆ ನಾಗೇಶ್ ಕಚೇರಿಯಿಂದ ನೇರವಾಗಿ ತೆರಳಿ ಕಚೇರಿ ಬಳಿಯೇ ನೇಣಿಗೆ ಶರಣಾಗಿದ್ದಾರೆ ಎನ್ನಲಾಗಿದೆ.

ಘಟನಾ ಸ್ಥಳಕ್ಕೆ ರಾಮನಗರದ ಐಜೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ  ನಡೆಸಿದ್ದಾರೆ.

Key words: Notice, Department of Mines and Earth Sciences, Lorry owner, suicide