ನಾನು ವೇಶ್ಯೆ ಪದ ಬಳಕೆ ಮಾಡಿಲ್ಲ: ಪದ ಬಳಸಿದ ಫೂಟೇಜ್ ನೀಡಿದ್ರೆ ರಾಜೀನಾಮೆ- ಬಿ.ಕೆ ಹರಿಪ್ರಸಾದ್.

ಬೆಂಗಳೂರು,ಜನವರಿ,20,2023(www.justkannada.in):  ವೇಶ್ಯೆಯರ ರೀತಿ ಹಲವರು ತಮ್ಮ ಶಾಸಕ ಸ್ಥಾನ ಮಾರಿಕೊಂಡು ಬಿಜೆಪಿಗೆ ಹೋದರು ಎಂದು ಹೇಳಿಕೆ ನೀಡಿದ್ದ ವಿಧಾನಪರಿಷತ್ ವಿಪಕ್ಷ ನಾಯಕ ಬಿ.ಕೆ ಹರಿಪ್ರಸಾದ್ ಇದೀಗ ವೇಶ್ಯೆ ಎಂಬ ಪದವನ್ನೇ ಬಳಸಿಲ್ಲ ಎಂದು ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಇಂದು ಮಾತನಾಡಿದ ಬಿ.ಕೆ ಹರಿಪ್ರಸಾದ್,  ನಾನು ವೇಶ್ಯೆ ಎಂಬ ಪದ ಬಳಕೆ ಮಾಡಿಲ್ಲ ಲೈಂಗಿಕ ಕಾರ್ಯಕರ್ತೆಯರಿಗೆ ಬೇಜಾರಾಗಬಹುದು ಎಂದು ಕ್ಷಮೆ ಕೇಳಿದೆ. ಲೈಂಗಿಕ ಕಾರ್ಯಕರ್ತರ ಬಗ್ಗೆ ಅಪಾರ ಗೌರವವಿದೆ. ನಾನು ವೇಶ್ಯೆ ಪದ ಬಳಸಿದ ಫೂಟೇಜ್ ನೀಡಿದರೇ ನಾನು ನನ್ನ ಸ್ಥಾನಕ್ಕೆ ರಾಜೀನಾಮೆ ನೀಡಲು ಸಿದ್ಧ ಎಂದಿದ್ದಾರೆ.

ಇನ್ನು ಈ ಬಾರಿ ಎರಡು ಸಿದ್ಧಾಂತದ ಮೇಲೆ ಚುನಾವಣೆ ನಡೆಯುತ್ತಿದೆ. ಒಂದು ಗಾಂಧಿಯವರ ಸತ್ಯ ಅಹಿಂಸೆಯ ಆಧಾರದ ಸಿದ್ದಾಂತ . ಇನ್ನೊಂದು ಗಾಂಧಿ ಕೊಂದ ಹಿಂಸೆ ಹಾಗೂ ಸುಳ್ಳಿನ ಸಿದ್ಧಾಂತ ಈ ಎರಡು ಸಿದ್ದಾಂತಗಳ ನಡುವಿನ ಹೋರಾಟದ ಚುನಾವಣೆ ಇದು. ಹೀಗಾಗಿ ಜನ ಸ್ಪಷ್ಟ ನಿರ್ಧಾರ ಮಾಡಬೇಕು ಮಕ್ಕಳಿಗೆ ಪೆನ್ನು ಪೇಪರ್ ನೀಡಿ ವಿದ್ಯಾವಂತರನ್ನಾಗಿ ಮಾಡಬೇಕಾ ಅಥವಾ  ತಲ್ವಾರ್ ಹಿಡಿದು ಭಯೋತ್ಪಾದಕರಾಗಿಸಬೇಕಾ..?  ಈ ಚುನಾವಣೆಯಲ್ಲಿ ಜನತೆ ಸೂಕ್ತ ನಿರ್ಧಾರ ತೆಗೆದುಕೊಳ್ಳಬೇಕು ಎಂದು  ಬಿಕೆ ಹರಿ ಪ್ರಸಾದ್ ಹೇಳಿದರು.

Key words:  not use – word –whore-BK Hariprasad