ಮೈಸೂರು,ಡಿಸೆಂಬರ್,15,2025 (www.justkannada.in): ಮೈಸೂರು ಜಿಲ್ಲೆ ಸರಗೂರು ತಾಲೂಕು ಕೊತ್ತೇಗಾಲ ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಬರುವ ಲಕ್ಕೂರು ಗ್ರಾಮದ ಹಾಲುಗಡ ಬಳಿ ಬಾರ್ ತೆರೆಯಲು ಅನುಮತಿ ನೀಡಬಾರದು ಮತ್ತು ಬೇರೆಡೆಯಿಂದ ಸ್ಥಳಾಂತರ ಮಾಡಬಾರದೆಂದು ಎಂದು ಒತ್ತಾಯಿಸಿ ಕರವೇ, ಡಿಎಸ್ಎಸ್ ಅಬಕಾರಿ ಇಲಾಖೆಗೆ ಪ್ರತ್ಯೇಕ ಮನವಿ ಪತ್ರ ಸಲ್ಲಿಸಿತು. 
ಹೆಚ್ ಡಿ ಕೋಟೆ ಪಟ್ಟಣದಲ್ಲಿರುವ ಅಬಕಾರಿ ಕಚೇರಿಗೆ ಆಗಮಿಸಿದ ಇಟ್ನಾ, ಕುಂಟಪಟ್ಟಣ, ಚಾಮೇಗೌಡನಹುಂಡಿ, ಶಾಂತಿಪುರ ಪುರದಕಟ್ಟೆ, ಕೊತ್ತೇಗಾಲ ಗ್ರಾಮಸ್ಥರು ಅಬಕಾರಿ ಇನ್ಸ್ ಪೆಕ್ಟರ್ ಶಿವರಾಜ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಜೊತೆಗೆ ದಲಿತ ಸಂಘರ್ಷ ಸಮಿತಿ ಮತ್ತು ಕರವೇ ಪ್ರವೀಣ್ ಶೆಟ್ಟಿ ಬಣ ಮನವಿ ಪತ್ರ ಸಲ್ಲಿಸಿ, ಒಂದು ವೇಳೆ ಬಾರ್ ತೆರೆಯಲು ಅನುಮತಿ ನೀಡಿದರೆ ಅಬಕಾರಿ ಆಫೀಸ್ ಮುಂದೆ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿತು.
ಮನವಿ ಪತ್ರ ಸ್ವೀಕರಿಸಿ ಮಾತನಾಡಿದ ಅಬಕಾರಿ ಇಲಾಖೆ ಅಧಿಕಾರಿ ಶಿವರಾಜ್, ಗಣೇಶ್ ಸರ್ಕಲ್ ಬಳಿ ಬಾರ್ ಗೆ ಅನುಮತಿ ನೀಡದಂತೆ ನಮಗೆ ಮನವಿ ಪತ್ರ ಬಂದಿದೆ. ಈ ಹಿಂದೆಯೂ ಕೂಡ ಮನವಿ ಪತ್ರ ಬಂದಿದ್ದು, ಪರಿಶೀಲನೆಗಾಗಿ ತಹಸೀಲ್ದಾರ್ ಗೆ ಕಳುಹಿಸಲಾಗಿದೆ. ಇದೀಗ ಮತ್ತೆ ಮನವಿ ಪತ್ರಗಳು ಬಂದಿದ್ದು, ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತೇವೆ ಬಳಿಕವಷ್ಟೇ ಕಾನೂನು ರೀತಿಯಲ್ಲೇ ಮುಂದಿನ ಕ್ರಮ ತೆಗೆದುಕೊಳ್ಳುತೇವೆ ಎಂದು ಹೇಳಿದರು.
ಈ ವೇಳೆ ಶ್ರೀ ಚಿಕ್ಕದೇವಮ್ಮನವರ ದೇವಸ್ಥಾನದ ಸೇವಾ ಅಭಿವೃದ್ಧಿ ಹಾಗೂ ಹಾಲುಗಡ ಜಾತ್ರಾ ಅಭಿವೃದ್ಧಿ ಟ್ರಸ್ಟ್ ಅಧ್ಯಕ್ಷ ದೊಡ್ಡವೀರನಾಯಕ ಮತ್ತಿತರರು ಉಪಸ್ಥಿತರಿದ್ದರು.
Key words: Karave, DSS, appeal, not, permission, open, bars, Mysore







