Monday, October 5, 2026

BDA Apartments

ಮತ್ತೆ ಜೆಡಿಎಸ್ ಪಕ್ಷ ವಿಸರ್ಜನೆ ಮಾತುಗಳನ್ನಾಡಿದ ಮಾಜಿ ಸಿಎಂ ಹೆಚ್.ಡಿ ಕುಮಾರ...
Home Front Page ಜೆಡಿಎಸ್ ಪಕ್ಷವೇ ಅಲ್ಲ ಅನ್ನೋರಿಗೆ ಯಾಕಿಷ್ಟು ತಲೆಬಿಸಿ..? -ಸಿದ್ದರಾಮಯ್ಯಗೆ ಹೆಚ್.ಡಿ ಕುಮಾರಸ್ವಾಮಿ ಟಾಂಗ್….

ಜೆಡಿಎಸ್ ಪಕ್ಷವೇ ಅಲ್ಲ ಅನ್ನೋರಿಗೆ ಯಾಕಿಷ್ಟು ತಲೆಬಿಸಿ..? -ಸಿದ್ದರಾಮಯ್ಯಗೆ ಹೆಚ್.ಡಿ ಕುಮಾರಸ್ವಾಮಿ ಟಾಂಗ್….

ಬೆಂಗಳೂರು,ಫೆಬ್ರವರಿ,14,2021(www.justkannada.in):  ಜೆಡಿಎಸ್ ಅಭ್ಯರ್ಥಿ ಹಾಕಲ್ಲ ಅಂದರೇ ಅವರಿಗೆ ಯಾಕೆ ಬೇಸರ…? ಜೆಡಿಎಸ್ ಪಕ್ಷವೇ ಅಲ್ಲ ಅಂದೋರಿಗೆ ಯಾಕೆ ತಲೆ ಬಿಸಿ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯಗೆ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಟಾಂಗ್ ನೀಡಿದರು.jk

ಬೆಂಗಳೂರಿನಲ್ಲಿ ಇಂದು ಮಾತನಾಡಿದ ಹೆಚ್.ಡಿ ಕುಮಾರಸ್ವಾಮಿ, ನನಗೆ ಬಿಜೆಪಿ ಬಗ್ಗೆ ಮೃದುಧೋರಣೆ ಇಲ್ಲ. ಯಾವ ಪಕ್ಷದ ಬಗ್ಗೆಯೂ ಮೃದು ಧೋರಣೆ ಇಲ್ಲ. ಜೆಡಿಎಸ್ ಅನ್ನ ಪಕ್ಷವೆ ಅಲ್ಲ ಎನ್ನುತ್ತಿದ್ದವರು ಉಪಚುನಾವಣೆಗೆ ಜೆಡಿಎಸ್ ಅಭ್ಯರ್ಥಿ ಹಾಕಲಿಲ್ಲ ಎಂದರೇ ಯಾಕೆ ತಲೆಬಿಸಿ ಮಾಡಿಕೊಳ್ಳಬೇಕು ಎಂದು ಸಿದ್ಧರಾಮಯ್ಯಗೆ ಚಾಟಿ ಬೀಸಿದರು.not -JDS party –forme cm-H.D. Kumaraswamy -Tong - Siddaramaiah.

ಮೂರು ಕ್ಷೇತ್ರಗಳ ಉಪಚುನಾವಣೆಗೆ ಅಭ್ಯರ್ಥಿ ಹಾಕ್ತೇವೆ.

ಮಸ್ಕಿ, ಸಿಂದಗಿ, ಬಸವಕಲ್ಯಾಣ ಮೂರು ಕ್ಷೇತ್ರಗಳ ಉಪಚುನಾವಣೆಯಲ್ಲಿ ಜೆಡಿಎಸ್ ಸ್ಪರ್ಧಿಸಲಿದೆ. ಮೂರು ಕ್ಷೇತ್ರಗಳಲ್ಲಿ ಜೆಡಿಎಸ್ ನಿಂದ ಅಭ್ಯರ್ಥಿ ಹಾಕುತ್ತೇವೆ ಎಂದು ಹೆಚ್.ಡಿ ಕುಮಾರಸ್ವಾಮಿ ಘೋಷಣೆ ಮಾಡಿದರು.

Key words:  not -JDS party –forme cm-H.D. Kumaraswamy -Tong – Siddaramaiah.