ಬಿಜೆಪಿಯವರಿಗೆ ಅಧಿಕಾರದ ಮದ:  ಹೆಚ್.ಡಿಡಿ ಆಹ್ವಾನಿಸದಿರುವುದು ಕನ್ನಡಿಗರಿಗೆ ಮಾಡಿದ ಅಪಮಾನ-ಸಿಎಂ ಇಬ್ರಾಹಿಂ.

ಕಲ್ಬುರ್ಗಿ,ನವೆಂಬರ್,12,2022(www.justkannada.in):  ಬಿಜೆಪಿಯವರಿಗೆ ಅಧಿಕಾರದ ಮದವೇರಿದೆ. ಕೆಂಪೇಗೌಡರ ಪ್ರತಿಮೆ ಲೋಕಾರ್ಪಣೆ ಕಾರ್ಯಕ್ರಮಕ್ಕೆ ಹೆಚ್.ಡಿ ದೇವೇಗೌಡರನ್ನ ಆಹ್ವಾನಿಸದೇ ಇರುವುದು ಕನ್ನಡಿಗರಿಗೆ ಮಾಡಿದ ಅಪಮಾನ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ವಾಗ್ದಾಳಿ ನಡೆಸಿದರು.

ಕಲ್ಬುರ್ಗಿಯಲ್ಲಿ ಇಂದು ಮಾತನಾಡಿದ ಸಿಎಂ ಇಬ್ರಾಹಿಂ, ಕೆಂಪೇಗೌಡ ಪ್ರತಿಮೆ ಅನಾವರಣ ವಿಚಾರದಲ್ಲಿ ಬಿಜೆಪಿಯವರು ಮಾಡಿದ್ದು ತಪ್ಪು.  ಹೆಚ್.ಡಿ ದೇವೇಗೌಡರನ್ನ ಕರೆಯದಿರುವುದು ಕನ್ನಡಿಗರಿಗೆ ಮಾಡಿದ ಅಪಮಾನ. ಮೋದಿ ನಾಡ ಕಟ್ಟಲು  ಇಲ್ಲಿಗೆ ಬಂದಿರಲಿಲ್ಲ ಪಕ್ಷ ಕಟ್ಟಲು ಬಂದಿದ್ದರು. ದೇಶದಲ್ಲಿ ಅಷ್ಟ ಲಕ್ಷ್ಮಿ ಹೋಗಿ, ದರಿದ್ರ ಲಕ್ಷ್ಮಿಬಂದಿದ್ದಾಳೆ ಎಂದು ಸರ್ಕಾರವನ್ನ ಟೀಕಿಸಿದರು.

ಹಾಗೆಯೇ ಕಾರ್ಯಕ್ರಮಕ್ಕೆ ವಿಪಕ್ಷ ನಾಯಕ  ಸಿದ್ದರಾಮಯ್ಯರನ್ನ ಕೂಡ ಕರೆಯಬೇಕಿತ್ತು.  ಬಿಜೆಪಿಯವರಿಗೆ ಅದಿಕಾರದ ಮದ ಹೆಚ್ಚಾಗಿದೆ ಎಂದು ಹರಿಹಾಯ್ದರು.

Key words: Not- inviting- HD Devegowda-insult – Kannadigas – CM Ibrahim.