ಕರ್ನಾಟಕಕ್ಕೆ ನೀಡಲು ಸಾಕಷ್ಟು ಅಕ್ಕಿ ದಾಸ್ತಾನು ಇಲ್ಲ: ಸಿಎಂ ಸಿದ್ದರಾಮಯ್ಯಗೆ ಚಂದ್ರಶೇಖರ ರಾವ್ ಮಾಹಿತಿ

ಬೆಂಗಳೂರು, ಜೂನ್ 18, 2023 (www.justkannada.in): ಅನ್ನಭಾಗ್ಯ ಯೋಜನೆಗಾಗಿ ಕರ್ನಾಟಕಕ್ಕೆ ನೀಡಲು ಸಾಕಷ್ಟು ಅಕ್ಕಿ ದಾಸ್ತಾನು ಇಲ್ಲ. ಇದರಿಂದ ಸಾಧ್ಯವಿಲ್ಲ ಎಂದು ತೆಲಂಗಾಣ ಹೇಳಿದೆ.

ಈ ಮೂಲಕ  ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಮತ್ತೊಂದು ಹಿನ್ನಡೆಯಾಗಿದ್ದು, ಅನ್ನಭಾಗ್ಯ ಯೋಜನೆ ಜಾರಿಗಾಗಿ ಮತ್ತೆ ಯೋಚನೆ ಮಾಡಬೇಕಿದೆ.

ತೆಲಂಗಾಣ ಮುಖ್ಯಮಂತ್ರಿ ಚಂದ್ರಶೇಖರ ರಾವ್ ಅವರೊಂದಿಗೆ ಮಾತನಾಡಿದ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ವಿಷಯ ತಿಳಿಸಿದ್ದಾರೆ.

ಕರ್ನಾಟಕವೂ ಅಕ್ಕಿಗಾಗಿ ಕಾಂಗ್ರೆಸ್ ಆಡಳಿತವಿರುವ ಛತ್ತೀಸ್‌ಗಢವನ್ನು ಸಂಪರ್ಕಿಸಿದೆ. ಅವರು 1.5 ಲಕ್ಷ ಮೆಟ್ರಿಕ್ ಟನ್ ನೀಡಬಹುದು ಎಂದು ಹೇಳಿದರು. ಆದರೆ, ದರ ಹೆಚ್ಚು, ಸಾರಿಗೆ ವೆಚ್ಚ ಹೆಚ್ಚಾಗಿದೆ’.

ಆಂಧ್ರಪ್ರದೇಶದೊಂದಿಗೆ ಸಂಪರ್ಕದಲ್ಲಿರಲು ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಅವರನ್ನು ಕೇಳಲಾಗಿದೆ. ನಾನು ಸಭೆ ಕರೆದಿದ್ದೇನೆ ನೋಡೋಣ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.