ನಾವು ಯಾವುದೇ ಧರ್ಮ ಒಡೆಯುವ ಕೆಲಸ ಮಾಡಿಲ್ಲ- ಮಾಜಿ ಸಚಿವ ಎಂ.ಬಿ ಪಾಟೀಲ್.

ಬೆಂಗಳೂರು,ಆಗಸ್ಟ್,20,2022(www.justkannada.in):  ಪ್ರತ್ಯೇಕ ಲಿಂಗಾಯತ್ ಧರ್ಮ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ ಪಾಟೀಲ್ ನಾವು ಯಾವುದೇ ಧರ್ಮ ಒಡೆಯುವ ಕೆಲಸ ಮಾಡಿಲ್ಲ ಎಂದಿದ್ದಾರೆ.

ಪ್ರತ್ಯೇಕ ಧರ್ಮದ ವಿಚಾರ ಕುರಿತು ಸಿದ್ಧರಾಮಯ್ಯ ನಿನ್ನೆ ರಂಭಾಪುರಿ ಮಠದಲ್ಲಿ ಶ್ರೀಗಳ ಬಳಿ ಪಶ್ಚಾತಾಪ ಪಟ್ಟ ವಿಚಾರ ಕುರಿತು ಪ್ರತಿಕ್ರಿಯಿಸಿದ ಎಂ.ಬಿ ಪಾಟೀಲ್,    ಈ ವಿಚಾರವನ್ನ ಸಿದ್ಧರಾಮಯ್ಯ ಬಳಿಯೇ ಕೇಳಬೇಕು. . ಶ್ರೀಗಳು ಸಿದ್ಧರಾಮಯ್ಯ ನಡುವೆ ಏನು ಚರ್ಚೆ ನಡೆದಿದೆಯೋ ಅವರನ್ನೇ ಕೇಳಬೇಕು ಎಂದರು.

ರಾಜ್ಯದಲ್ಲಿ ಲಿಂಗಾಯತದ 99 ಉಪಪಂಗಡ ಇದೆ.  99 ಉಪಪಂಗಡಗಳಿಗೆ ಸೌಲಭ್ಯ ಸಿಗುತ್ತಿಲ್ಲ.  ಶೈಕ್ಷಣಿಕ ಸೌಲಭ್ಯ ಕಲ್ಪಿಸುವ ಉದ್ಧೇಶವಿತ್ತು ಈ ಹಿನ್ನೆಲೆಯಲ್ಲಿ ಈ ಪ್ರಯತ್ನ ಮಾಡಲಾಗಿತ್ತು. ಈಗ ರಾಜ್ಯದಲ್ಲಿ ಉಪಪಂಗಡಗಳು ಬೇರೆ ಬೇರೆಯಾಗುತ್ತಿವೆ. ಹೀಗಾಗಿ ನಾವು ಒಗ್ಗೂಡಿಸುವ ಪ್ರಯತ್ನ ಮಾಡುತ್ತೇವೆ ಎಂದರು.

Key words: not -done –any- religion -breaking -Former minister -MB Patil.