ಮಹಿಷ ದಸರಾ ಆಚರಣೆಗೆ ಅನುಮತಿ ನೀಡದ ಜಿಲ್ಲಾಡಳಿತ ವಿರುದ್ಧ ಮಾಜಿ‌ ಮೇಯರ್ ಪುರುಷೋತ್ತಮ್ ಮತ್ತು ಪ್ರೊ. ಮಹೇಶ್ ಚಂದ್ರಗುರು ಆಕ್ರೋಶ.

ಮೈಸೂರು,ಅಕ್ಟೋಬರ್,4,2021(www.justkannada.in): ಮಹಿಷ ದಸರಾ ಆಚರಣೆಗೆ ಅನುಮತಿ ನೀಡದ ಹಿನ್ನೆಲೆ,  ಸಿಎಂ ಬಸವರಾಜ ಬೊಮ್ಮಾಯಿ ಮತ್ತು ಮೈಸೂರು ಜಿಲ್ಲಾಡಳಿತ ವಿರುದ್ಧ ಮಹಿಷ ದಸರಾ ಆಚರಣಾ ಸಮಿತಿ ಆಕ್ರೋಶ ವ್ಯಕ್ತಪಡಿಸಿದೆ.

ಮಹಿಷ ದಸರಾ ಆಚರಣೆ ಸಮಿತಿ ವತಿಯಿಂದ ಇಂದು ಸುದ್ದಿಗೋಷ್ಠಿ ನಡೆಸಲಾಯಿತು ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಮಾಜಿ‌ ಮೇಯರ್ ಪುರುಷೋತ್ತಮ್, ಜಿಲ್ಲಾಧಿಕಾರಿ ಹಾಗೂ ಪೊಲೀಸ್ ಆಯುಕ್ತರಿಗೆ ಮಹಿಷ  ದಸರಾ ಆಚರಣೆಗೆ ಅವಕಾಶ ಕೋರಿ ಮನವಿ ಸಲ್ಲಿಸಲಾಗಿತ್ತು. ಕಳೆದ ನಾಲ್ಕೈದು ದಿನಗಳಿಂದ ಜಿಲ್ಲಾಧಿಕಾರಿ ಭೇಟಿ ಮಾಡುವ ಪ್ರಯತ್ನ ಮಾಡುತ್ತಿದ್ದೇವೆ. ಆದರೆ ಅವರು ಸಿಗುತ್ತಿಲ್ಲ. 20 ಜನಕ್ಕೆ ಪುಷ್ಪಾರ್ಚನೆಗೆ ಅವಕಾಶ ಕೇಳಿದ್ದವು. ಆದರೆ ಜಿಲ್ಲಾಡಳಿತದಿಂದ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಯಾವುದೇ ಧಾರ್ಮಿಕ ಆಚರಣೆಗೆ ಅಡ್ಡಿಪಡಿಸಬಾರದು ಎಂಬುದು ಕಾನೂನು. ಐಎಎಸ್ ಐಪಿಎಸ್ ಅಧಿಕಾರಿಗಳು ನೀವು ಸಂವಿಧಾನ ಓದಿದ್ದರೆ ನಮಗೆ ಅನುಮತಿ ಕೊಡಬೇಕಿತ್ತು. ಯಾರು ನಿಮಗೆ ಐಎಎಸ್ ಸರ್ಟಿಫಿಕೇಟ್ ಕೊಟ್ರೊ ಗೊತ್ತಿಲ್ಲ. ನೀವು ಜನರ ಸೇವೆ ಸಲ್ಲಿಸಬೇಕಾದವರು. ನೀವು ಏಕ‌ಮುಖವಾಗಿ ಅಧಿಕಾರ ಮಾಡಿದರೆ ರಾಜೀನಾಮೆ ನೀಡುವುದು ಸೂಕ್ತ ಎಂದು ವಾಗ್ದಾಳಿ ನಡೆಸಿದರು.

ನಮ್ಮ ಆಚರಣೆಗೆ ಯಾವುದೇ ದೊಣ್ಣೆ ನಾಯಕನ ಅಪ್ಪಣೆ ಬೇಕಿಲ್ಲ.     

ನಮ್ಮ ಆಚರಣೆಗೆ ಯಾವುದೇ ದೊಣ್ಣೆ ನಾಯಕನ ಅಪ್ಪಣೆ ಬೇಕಿಲ್ಲ. ಅಶೋಕ ಕಾಲದಿಂದಲೂ ವಿಜಯದಶಮಿ ಆಚರಣೆ ಇದೆ. ನಾವು ದಸರಾ ಆಚರಣೆ ಮಾಡಬೇಡಿ ಅಂತ ಅರ್ಜಿ ಕೊಡ್ತೇನೆ. ನೀವು ನಿಲ್ಲಿಸಲು ಸಾಧ್ಯವೇ. ನಮ್ಮ ಧಾರ್ಮಿಕ ಆಚರಣೆಗೆ ಅಡ್ಡಿ ಯಾಕೆ. ಜಿಲ್ಲೆಯಾದ್ಯಂತ ಮಹಿಷಿ ದಸರಾ ಆಚರಣೆ ನಡೆಯುತ್ತಿದೆ. ನಾಳೆ ಬೆಳಗ್ಗೆ 10.30ಕ್ಕೆ ಅಶೋಕ ಪುರಂ ಉದ್ಯಾನವನದಲ್ಲಿ ಮಹಿಷನಿಗೆ ಪುಷ್ಪಾರ್ಚನೆ ಮಾಡುತ್ತೇವೆ. ನಾಳೆ‌ ಬೆಳಗ್ಗೆ 9 ಕ್ಕೆ ಅಶೋಕ ವೃತ್ತದ ಬುದ್ದ ವಿಹಾರ ಹೊರಭಾಗದಿಂದ ಮೆರವಣಿಗೆ ಹೊರಡಲಿದೆ ಎಂದು ಮಹಿಷ ದಸರಾ ಆಚರಣಾ ಸಮಿತಿ ಅಧ್ಯಕ್ಷ ಪುರುಷೋತ್ತಮ್  ಹೇಳಿದರು.

ಸಂವಿಧಾನಕ್ಕೆ ಬೆಲೆ ಕೊಡೆದೆ ಇರುವವರು ಮೂರ್ಖರು – ಪ್ರೊ ಮಹೇಶ್ ಚಂದ್ರ ಗುರು ಕಿಡಿ

ಇದೇ ವೇಳೆ ಮಾತನಾಡಿದ ಪ್ರೊ ಮಹೇಶ್ ಚಂದ್ರಗುರು,  ಸಂವಿಧಾನಕ್ಕೆ ಬೆಲೆ ಕೊಡೆದೆ ಇರುವವರು ಮೂರ್ಖರು. ನಿಮ್ಮ ನಾಡಹಬ್ಬ ದಸರಾದಲ್ಲಿ  ಭಾಗಿಯಾಗ್ತಾ ಇದ್ದೀವಿ. ನೀವು ಯಾಕೆ ಭಾಗಿಯಾಗಲ್ಲ. ನಿಮ್ ಸಂಸ್ಕೃತಿಗೆ ನೀವು ಜಿಂದಾಬಾದ್ ಹೇಳಿ. ನಮ್ಮ ಸಂಸ್ಕೃತಿಗೆ ನಾವು ಜಿಂದಾಬಾದ್ ಹೇಳುತ್ತೇವೆ. ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಆಗಲು ಅನರ್ಹರು. ಯಾಕಂದ್ರೆ ಸಂವಿಧಾನದ ಮೇಲೆ ಗೌರವ ಇಲ್ಲ. ಸಂವಿಧಾನ ಜ್ಞಾನ ಇಲ್ಲ. ನಮ್ ಓಟ್ ಬೇಕು ನಮ್ಮ ಸಂಸ್ಕೃತಿ ಬೇಡವೇ. ನಮ್ಮ‌ಮೂಲ ನಿವಾಸಿಗಳು ಬೇಡವೇ ಎಂದು ಪ್ರಶ್ನಿಸಿದರು.

ನಿಮಗೆ ಸಂವಿಧಾನ ಪ್ರಜ್ಞೆ ಇಲ್ಲ. ಮೈಸೂರು ಜಿಲ್ಲಾಧಿಕಾರಿ ಅನರ್ಹರು, ಅಯೋಗ್ಯರು,  ನೀವು ಮಹಿಷ ದಸರಾ ಆಚರಣೆಗೆ ಕಾನೂನಾತ್ಮಕ ಅನುಮತಿ ನೀಡದಿರುವುದು ಕಾನೂನು ಬಾಹಿರ. ನಾಡ ಅದಿದೇವತೆ ಚಾಮುಂಡೇಶ್ವರಿ ಅಲ್ಲ , ಭುವನೇಶ್ವರಿ. ಆರ್ಟಿಕಲ್ 25 ಮತ್ತು 51 ರ ಸಂವಿಧಾನ ಉಲ್ಲಂಘನೆ ಆಗಿದೆ ಎಂದು ಮಹಿಷ ದಸರಾ ಆಚರಣಾ ಸಮಿತಿ ಸದಸ್ಯ ಪ್ರೊ ಮಹೇಶ್ ಚಂದ್ರಗುರು ಹೇಳಿದರು.

Key words: not allowing – celebration – Mahisha Dasara-Former Mayor -Purushottam – Pro. Mahesh Chandraguru- outrage.

ENGLISH SUMMARY…

Former Mayor Purushottam and Prof. Mahesh Chandra Guru express ire against District Admin. for not permitting to celebrate ‘Mahisha Dasara’
Mysuru, October 4, 2021 (www.justkannada.in): The Mahisha Dasara Celebration Committee members have expressed their displeasure and ire upon the Chief Minister Basavaraj Bommai and the Mysuru District Administration for not permitting to celebrate Mahisha Dasara.
Addressing a press meet today in Mysuru, former Mayor Purushottam informed that they had applied to the Deputy Commissioner and the Police Commissioner to permit to celebrate Mahisha Dasara. “We are trying to meet the Deputy Commissioner for the last 4-5 days, but he is not meeting us. We had asked permission to perform floral tributes to 20 people. But we have not received any response from the district administration. According to law, any religious celebrations should not be interrupted. Being IAS, IPS officers if you have studied law you should have allowed us. If you are so biased you should resign,” he said.
Further, he said they would celebrate Mahisha Dasara in the district at any cost and pay floral tributes to the Mahisha statue located at the Ashokpuram park, tomorrow at 10.30 am.
Keywords: Mahisha Dasara/ Mysuru/ celebration