ವೈಯಕ್ತಿಕವಾಗಿ ಬಂದು ಖುದ್ದು ಭೇಟಿ ಮಾಡಿ ರಾಜೀನಾಮೆ ನೀಡದಿದ್ದರೇ ಅಂಗೀಕರಿಸಲ್ಲ: ಅತೃಪ್ತ ಶಾಸಕರಿಗೆ ಶಾಕ್ ನೀಡಿದ ಸ್ಪೀಕರ್ ರಮೇಶ್ ಕುಮಾರ್…

ಬೆಂಗಳೂರು,ಜು,9,2019(www.justkannada.in)  ವೈಯಕ್ತಿಕವಾಗಿ ಬಂದು ರಾಜೀನಾಮೆ ನೀಡದಿದ್ದರೇ ಶಾಸಕರ ರಾಜೀನಾಮೆಯನ್ನ ಅಂಗೀಕರಿಸಲ್ಲ ಎಂದು ಸ್ಪೀಕರ್ ರಮೇಶ್ ಕುಮಾರ್ ಸ್ಪಷ್ಟನೆ ನೀಡಿದ್ದಾರೆ.

ಅತೃಪ್ತ ಶಾಸಕರ ರಾಜೀನಾಮೆ ಕುರಿತು ಪರಿಶೀಲನೆ ನಡೆಸಿ ಬಳಿಕ ಮಾತನಾಡಿದ ಸ್ಪೀಕರ್ ರಮೇಶ್ ಕುಮಾರ್,  ಶಾಸಕರು ಖುದ್ದು ಭೇಟಿಯಾಗದೇ ರಾಜೀನಾಮೆ ಅಂಗೀಕಾರವಿಲ್ಲ. ಶಾಸಕರನ್ನ ವೈಯಕ್ತಿಕವಾಗಿ ಕರೆದು ಮಾತನಾಡಿಸದೆ ರಾಜೀನಾಮೆ ಅಂಗೀಕಾರ ಮಾಡಲ್ಲ ಎಂದು ಹೇಳಿಕೆ ನೀಡಿದ್ದಾರೆ.

ರಾಜೀನಾಮೆ ಕೊಡುವ ವೇಳೆ ಶಾಸಕರು ಪೂರ್ವಾನುಮತಿ ಪಡೆದಿಲ್ಲ. ಅವರು ರಾಜೀನಾಮೆ ಸಲ್ಲಿಸಲು ಬರುವ ವಿಚಾರ ನನಗೆ ಗೊತ್ತಿರಲಿಲ್ಲ.  ಹೀಗಾಗಿ ನನ್ನ ಕಚೇರಿಯಿಂದ ವೈಯಕ್ತಿಕ ಕೆಲಸಕ್ಕೆ ನಾನು ತೆರಳಿದ್ದೆ. ನನ್ನ ಅನುಪಸ್ಥಿತಿಯಲ್ಲಿ ನೀಡಿರುವ ರಾಜೀನಾಮೆಗೆ ಹೊಣೆಯಲ್ಲ. ನಾನು ನಿಯಮಾವಳಿ ಪ್ರಕಾರ ನಡೆದುಕೊಳ್ಳಬೇಕಾಗುತ್ತದೆ ಎಂದು ಸ್ಪೀಕರ್ ರಮೇಶ್ ಕುಮಾರ್ ತಿಳಿಸಿದ್ದಾರೆ.

Key words: not acceptable. Resigning –Speaker- Ramesh Kumar