ಅಂತೆ ಕಂತೆಗಳಿಗೆ ಕೊನೆ: ಸಾರ್ವಜನಿಕವಾಗಿ ಪ್ರತ್ಯಕ್ಷವಾದ ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್‌ ಜಾಂಗ್‌ ಉನ್‌

ಉತ್ತರ ಕೊರಿಯಾ, ಮೇ 02, 2020 (www.justkannada.in) : ಉತ್ತರ ಕೊರಿಯಾ ಮಾಧ್ಯಮಗಳು ಕಿಮ್‌ ಜಾಂಗ್‌ ಉನ್‌ ಅವರು ಸಾರ್ವಜನಿಕವಾಗಿ ಕಾಣಿಸಿಕೊಂಡಿರುವ ಬಗ್ಗೆ ವರದಿ ಮಾಡಿವೆ.

ಸನ್‌ಚೋನ್‌ ನಗರದಲ್ಲಿ ರಸಗೊಬ್ಬರ ಕಾರ್ಖಾನೆಯೊಂದರ ಉದ್ಘಾಟನಾ ಸಮಾರಂಭದಲ್ಲಿ ಕಿಮ್‌ ಜಾಂಗ್‌ ಉನ್‌ ಪಾಲ್ಗೊಂಡಿದ್ದು, ಅವರು ರಿಬ್ಬನ್‌ ಕತ್ತರಿಸುವ ಚಿತ್ರವನ್ನು ಉತ್ತರ ಕೊರೊಯಾ ಮಾಧ್ಯಮಗಳು ಬಿಡುಗಡೆ ಮಾಡಿವೆ.

ಕಳೆದ ಏಪ್ರಿಲ್‌ 15ರಿಂದ ಉತ್ತರ ಕೊರೊಯಾ ಸರ್ವಾಧಿಕಾರಿ ನಾಯಕ ಕಿಮ್‌ ಜಾಂಗ್‌ ಉನ್‌ ಅವರ ಆರೋಗ್ಯದ ಬಗ್ಗೆ ಹಲವು ಗಾಳಿಸುದ್ದಿಗಳು ಎದ್ದಿದ್ದವು. ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದ ಕಿಮ್‌ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ಕೆಲ ಮಾಧ್ಯಮಗಳು ವರದಿ ಮಾಡಿದ್ದವು.