Monday, October 5, 2026

BDA Apartments

ಪ್ರಧಾನಿ ಮೋದಿ ಭೇಟಿಯಾಗಿ BDA JK_Adv BDA Adv
Home Cinema ಯಾರಿಗೂ ಏಕವಚನ ಪ್ರಯೋಗ ಬೇಡ: ಶಾಸಕ ನಾಗೇಂದ್ರ

ಯಾರಿಗೂ ಏಕವಚನ ಪ್ರಯೋಗ ಬೇಡ: ಶಾಸಕ ನಾಗೇಂದ್ರ

ಮೈಸೂರು, ನವೆಂಬರ್ 7, 2021: ರಾಜಕೀಯ ನಾಯಕ ಏಕವಚನ ಪ್ರಯೋಗ ವಿಚಾರಕ್ಕೆ ಸಂಬಂಧಿಸಿದಂತೆ ಯಾವ ಪಕ್ಷದವರೂ ಈ ರೀತಿ ಮಾತುಗಳನ್ನ ಆಡಬಾರದು ಎಂದು ಶಾಸಕ ಎಲ್.ನಾಗೇಂದ್ರ ಹೇಳಿದ್ದಾರೆ.

ನಗರದಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಅವರಿಗೂ ಮನವಿ ಮಾಡುತ್ತೇನೆ. ನರೇಂದ್ರ ಮೋದಿ ಈ ದೇಶದ ಪ್ರಧಾನಿ. ದೇಶದ ಅತ್ಯುನ್ನತ ಹುದ್ದೆ ಅದು. ಅದಕ್ಕೆ ಗೌರವ ಕೊಡಬೇಕು ಎಂದು ತಿಳಿಸಿದರು.

ಅಟಲ್ ಬಿಹಾರಿ ವಾಜಪೇಯಿ ಕೂಡ ವಿರೋಧ ಪಕ್ಷದಲ್ಲಿ ಇದ್ದವರು. ಎಮರ್ಜೆನ್ಸಿಸಂದರ್ಭದಲ್ಲಿ ಭಾರತಾಂಬೆಗೆ ಜೈ ಅಂದವರನ್ನ ಅರೆಸ್ಟ್ ಮಾಡುವ ಸ್ಥಿತಿ ಇತ್ತು ಅಂತಹ ಸಂದರ್ಭದಲ್ಲಿ ಇಂದಿರಾ ಗಾಂಧಿ ಅವರನ್ನು ದುರ್ಗೆ ಅಂತ ಹೇಳಿದ್ದರು. ಅಂತಹ ವ್ಯಕ್ತಿತ್ವ ಇದ್ದಂತ ಪಕ್ಷ ಬಿಜೆಪಿ. ದೇಶ ಪ್ರಧಾನಿಗೆ ಮಾತನಾಡುವ ಸಂದರ್ಭದಲ್ಲಿ ಗೌರವ ಕೊಡಿ. ಈ ದೇಶದಲ್ಲಿ ಕಾಂಗ್ರೆಸ್ ಪಾರ್ಟಿ ಪರಿಸ್ಥಿತಿ ಏನಿದೆ ಅಂತ ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದರು.