ಟ್ರಂಪ್ ಕನಸು ಭಗ್ನ: ಮರಿಯಾ ಮಚಡೋಗೆ 2025ರ ನೊಬೆಲ್ ಶಾಂತಿ ಪ್ರಶಸ್ತಿ ಘೋಷಣೆ

ವಾಷಿಂಗ್ಟನ್,ಅಕ್ಟೋಬರ್,10,2025 (www.justkannada.in): ನೊಬೆಲ್ ಪ್ರಶಸ್ತಿಯ ನಿರೀಕ್ಷೆಯಲ್ಲಿದ್ದ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕನಸು ಭಗ್ನವಾಗಿದ್ದು ಮರಿಯಾ ಮಚಡೋ ಅವರಿಗೆ 2025ರ ನೊಬೆಲ್ ಶಾಂತಿ ಪ್ರಶಸ್ತಿ ಘೋಷಣೆ ಮಾಡಲಾಗಿದೆ.

ಪ್ರಪಂಚದ 7 ಯುದ್ದಗಳನ್ನ ನಿಲ್ಲಿಸಿದ್ದೇನೆ ತಮಗೆ ನೊಬೆಲ್  ಪ್ರಶಸ್ತಿ ಸಿಗಬೇಕು ಎಂದು ಡೊನಾಲ್ಡ್ ಟ್ರಂಪ್ ಹೇಳಿಕೆ ನೀಡಿದ್ದರು.ಆದರೆ ಡೊನಾಲ್ಡ್ ಟ್ರಂಪ್  ಕನಸು ಭಗ್ನವಾಗಿದ್ದು,  ವೆನಜುವೆಲಾದ ವಿಪಕ್ಷ ನಾಯಕಿ ಮರಿಯಾ ಮಚಡೋ ಅವರಿಗೆ 2025ರ ನೊಬೆಲ್ ಶಾಂತಿ ಪ್ರಶಸ್ತಿ ಲಭಿಸಿದೆ.

ವೆನಜುವೆಲಾದ ಸರ್ವಾಧೀಕಾರದ ವಿರುದ್ದ ದಶಕಗಳ ಕಾಲ ಮರಿಯಾ ಮಚಡೋ ಹೋರಾಟ ನಡೆಸಿದ್ದರು.  ಪ್ರಜಾಪ್ರಭುತ್ವದ ರಕ್ಷಣೆಗಾಗಿ ನಿರಂತರ ಹೋರಾಟ ಮಾಡಿದ್ದರು.  ಮರಿಯಾ ಅವರ ದಿಟ್ಟ ನೈತಿಕ ನಾಯಕತ್ವಕ್ಕಾಗಿ ನೊಬೆಲ್ ಶಾಂತಿ ಪ್ರಶಸ್ತಿ ಘೋಷಿಸಲಾಗಿದೆ.

Key words: Maria Machado, awarded, 2025 Nobel Peace Prize