ನಿಮ್ಮ ವಿಪ್ ಗೆ ಯಾವುದೇ ಕವಡೆ ಕಾಸಿನ ಕಿಮ್ಮತ್ತಿಲ್ಲ-  ಸದನದಲ್ಲಿ ಸಿದ್ದರಾಮಯ್ಯಗೆ ಟಾಂಗ್ ಕೊಟ್ಟ ಬಿಎಸ್ ಯಡಿಯೂರಪ್ಪ…

ಬೆಂಗಳೂರು,ಜು,23,2019(www.justkannada.in): ಶೆಡ್ಯುಲ್ 10ರ ಬಗ್ಗೆ ಮಾಜಿ ಸಿಎಂ ಸಿದ್ದರಾಮಯ್ಯ ಮಾತನಾಡುತ್ತಿದ್ದ ವೇಳೆ  ವಿಪಕ್ಷ ನಾಯಕ ಬಿಎಸ್ ಯಡಿಯೂರಪ್ಪ ನಿಮ್ಮ ವಿಪ್ ಗೆ ಯಾವುದೇ ಕವಡೆ ಕಾಸಿನ ಕಿಮ್ಮತ್ತಿಲ್ಲ ಎಂದು ಹೇಳಿದರು.

ವಿಧಾನಸಭೆಯಲ್ಲಿ ವಿಶ್ವಾಸಮತಯಾಚನೆ ಮೇಲಿನ ಚರ್ಚೆ ವೇಳೆ ಕ್ರಿಯಾಲೋಪದ ಬಗ್ಗೆ ಚರ್ಚೆ ಆಯಿತು. ಈ ನಡುವೆ  ವಿಧಾನಸಭೆಯಲ್ಲಿ ಮಾತನಾಡಿದ ಸಿದ್ದರಾಮಯ್ಯ ಇಂದು ಶೆಡ್ಯುಲ್ 10ರ ಬಗ್ಗೆ ಮಾತನಾಡುತ್ತಿದ್ದರು. ಈ ಸಮಯದಲ್ಲಿ ಸಿದ್ದರಾಮಯ್ಯ ಅವರ ಪ್ರಸ್ತಾಪಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಬಿಎಸ್ ಯಡಿಯೂರಪ್ಪ, 15 ಮಂದಿ  ಶಾಸಕರು ಸ್ಪೀಕರ್ ಅವರನ್ನು ಭೇಟಿಯಾಗಿ ರಾಜೀನಾಮೆ ಸಲ್ಲಿಸಿದ್ದಾರೆ. ಹೀಗಾಗಿ ಅವರಿಗೆ ಯಾವುದೇ ಕಾರಣಕ್ಕೂ ವಿಪ್ ಅನ್ವಯವಾಗುವುದಿಲ್ಲ. ನಿಮ್ಮ ವಿಪ್ ಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ ಎಂದು ಬಿಎಸ್ ಯಡಿಯೂರಪ್ಪ ತಿಳಿಸಿದರು.

ಇದೇ ವೇಳೆ ಬಿಎಸ್ ವೈಗೆ ಟಾಂಗ್ ಕೊಟ್ಟ ಸಿದ್ದರಾಮಯ್ಯ, ಬಿಎಸ್ ವೈ ಕಾನೂನು ಯಾವ ರೀತಿ ಗ್ರಹಿಸಿದ್ದಾರೋ ಗೊತ್ತಿಲ್ಲ. ನಾನು ಗ್ರಹಿಸಿದ ರೀತಿ ಹೇಳುತ್ತೇನೆ.   ವಿಪ್ ಕೊಡಬೇಕಾಗಿಲ್ಲ. ರಾಜೀನಾಮೆ ಕೊಡಬೇಕಾಗಿಲ್ಲ.  ಬೇರೆ ಪಕ್ಷದ ಜತೆ ಸಂಬಂಧ ಹೊಂದಿದ್ದರೇ ಅನರ್ಹಗೊಳಿಸಬಹುದು.  ವಿಪ್ ನೀಡಬೇಡಿ ಎಂದು ಸುಪ್ರೀಂಕೋರ್ಟ್ ನನಗೆ ಹೇಳಿಲ್ಲ. ಸದನಕ್ಕೆ ಬರುವಂತೆ ಒತ್ತಡ ಹೇರಬಾರದು ಎಂದು ಮಾತ್ರ ಹೇಳಿದೆ ಎಂದು ತಿರುಗೇಟು ನೀಡಿದರು.

Key words: No whip -BS Yeddyurappa-assembly-siddaramaiah