Thursday, August 20, 2026

BDA Apartments

Home Front Page ಹೆಚ್.ಡಿ ದೇವೇಗೌಡರು ನನಗೆ ಕರೆ ಮಾಡಿದ್ದರೆಂಬ ವಿಚಾರದಲ್ಲಿ ಸತ್ಯಾಂಶ ಇಲ್ಲ- ಸಿಎಂ ಬಿಎಸ್ ಯಡಿಯೂರಪ್ಪ ಸ್ಪಷ್ಟನೆ…

ಹೆಚ್.ಡಿ ದೇವೇಗೌಡರು ನನಗೆ ಕರೆ ಮಾಡಿದ್ದರೆಂಬ ವಿಚಾರದಲ್ಲಿ ಸತ್ಯಾಂಶ ಇಲ್ಲ- ಸಿಎಂ ಬಿಎಸ್ ಯಡಿಯೂರಪ್ಪ ಸ್ಪಷ್ಟನೆ…

ಬೆಂಗಳೂರು,ನ,6,2019(www.justkannada.in):  ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು ಸಿಎಂ ಬಿಎಸ್ ವೈಗೆ ಕರೆ ಮಾಡಿ ಬಿಜೆಪಿ ಸರ್ಕಾರದ ರಕ್ಷಣೆ ಮಾಡುವ ಬಗ್ಗೆ ಅಭಯ ನೀಡಿದ್ದಾರೆಂಬ ವರದಿಯಾದ ಹಿನ್ನೆಲೆ ಈ ಬಗ್ಗೆ ಸ್ಪಷ್ಟನೆ ನೀಡಿರುವ ಸಿಎಂ ಬಿಎಸ್ ಯಡಿಯೂರಪ್ಪ. ಹೆಚ್.ಡಿಡಿ ನನಗೆ ಕರೆ ಮಾಡಿ ಮಾತನಾಡಿಲ್ಲ ಎಂದು ತಿಳಿಸಿದ್ದಾರೆ.

ಹೆಚ್.ಡಿ ದೇವೇಗೌಡರ ಜತೆ  ದೂರವಾಣಿ ಮಾತುಕತೆ ನಿರಾಕರಿಸಿದ ಸಿಎಂ ಬಿಎಸ್ ವೈ, ಹೆಚ್.ಡಿ ದೇವೇಗೌಡರು ನನಗೆ ಕರೆ ಮಾಡಿದ್ದಾರೆಂಬ ವಿಚಾರದಲ್ಲಿ ಸತ್ಯಾಂಶ ಇಲ್ಲ. ಹೆಚ್.ಡಿಡಿ ನನಗೆ ಫೋನ್ ಮಾಡಿಲ್ಲ. ದೇವೇಗೌಡರಿಗೆ ಯಾವುದು ತಪ್ಪು ಯಾವುದು ಸರಿ ಎಂಬುದನ್ನ ತೀರ್ಮಾನಿಸುವ ಶಕ್ತಿ ಅವರಿಗಿದೆ. ನಾವು ದೇವೇಗೌಡರ ಹೆಸರನ್ನ ಯಾವುದೇ ಸಂದರ್ಭದಲ್ಲಿ ಪ್ರಸ್ತಾಪಿಸಿಲ್ಲ ಎಂದು ತಿಳಿಸಿದರು.

ಜೆಡಿಎಸ್ ಕಾರ್ಯಕರ್ತರ ಮೇಲೆ ಯಾದಗಿರಿ ಪಿಎಸ್ಐ ಹಲ್ಲೆ ಖಂಡಿಸಿ ಹೆಚ್.ಡಿಡಿ ಪ್ರತಿಭಟನೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಿಎಂ ಬಿಎಸ್ ವೈ, ಯಾದಗಿರಿ ಪಿಎಸ್ ಐ ಬಾಪುಗೌಡರನ್ನ ವರ್ಗಾವಣೆ ಮಾಡಲು ಆದೇಶ ಹೊರಡಿಸಲಾಗಿದೆ. ಜತೆಗೆ ರಜೆ ಮೇಲೆ ತೆರಳುವಂತೆ ಸೂಚಿಸಲಾಗಿದೆ ಎಂದರು.

Key words: no truth -HD Deve Gowda –phone-  CM BS Yeddyurappa