ಔಷಧಿ ಖರೀದಿಗೆ ಟೆಂಡರ್ ಪ್ರಕ್ರಿಯೆ ಬೇಡ- ಶಾಸಕ ತನ್ವೀರ್‌ ಸೇಠ್   

ಮೈಸೂರು,ಮೇ,15,2021(www.justkannada.in): ಕೊರೋನಾ ಲಸಿಕೆ ಖರೀದಿಗಾಗಿ ಸರ್ಕಾರ ಜಾಗತಿಕ ಟೆಂಡರ್ ಕರೆದಿದ್ದು, ಈ ನಡುವೆ   ಔಷಧಿ ಖರೀದಿಗೆ ಟೆಂಡರ್ ಪ್ರಕ್ರಿಯೆ ಬೇಡ. ಆಯಾ ಭಾಗದಲ್ಲಿ ವಿವೇಚನೆಯಡಿ ಖರೀದಿಗೆ ಅವಕಾಶ ಕೊಡಿ ಎಂದು ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್ ಹೇಳಿದ್ದಾರೆ.jk

ಮೈಸೂರಿನಲ್ಲಿ ಇಂದು ಮಾತನಾಡಿದ ಶಾಸಕ ತನ್ವೀರ್ ಸೇಠ್, ವಿಪತ್ತು ನಿರ್ವಹಣಾ ನಿಧಿಯಲ್ಲಿ  ಔಷಧ ಖರೀದಿಗೆ ಕ್ರಮ ಕೈಗೊಳ್ಳಿ‌. ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಔಷಧಿ ಖಾಲಿಯಾಗಿದೆ. ಶಾಸಕರು ಸ್ವಂತ ಖರ್ಚಿನಲ್ಲಿ ಔಷಧಿ ಖರೀದಿಸಿ ಹಂಚುತ್ತಿದ್ದಾರೆ. ಎಲ್ಲರೂ ಹೆಚ್ಚು ದಿನ ಖರೀದಿಸಿ ಹಂಚಲು ಸಾಧ್ಯವಿಲ್ಲ. ಸಣ್ಣಪುಟ್ಟ ಸಮಸ್ಯೆಗಳಿಗೂ ಔಷಧಿ ಸಿಗದೆ ಬಳಲುತ್ತಿದ್ದಾರೆ ಎಂದರು.No tender -process - drug –purchase- MLA- Tanveer Sait

ಹಾಗೆಯೇ ಟಾಸ್ಕ್‌ಫೋರ್ಸ್‌ ಸಮಿತಿ ಸಭೆಯಲ್ಲಿ ರಾಜಕೀಯ ಮಾಡಬೇಡಿ. ಕೆಲ ಸಭೆಗಳಿಗೆ ಮಾತ್ರ ನಮ್ಮನ್ನ ಕರೆಯುತ್ತಾರೆ. ಕೆಲ ಸಭೆಗಳಿಗೆ ಕರೆಯುವುದಿಲ್ಲ. ನಾವು ಈ ಸಂದರ್ಭದಲ್ಲಿ ಸರ್ಕಾರವನ್ನ ಟೀಕೆ ಮಾಡಲು ನಿಂತಿಲ್ಲ. ಜನರಿಗೆ ಸ್ಪಂದಿಸಲು ಶಕ್ತಿ ಮೀರಿ‌ ಕೆಲಸ ಮಾಡುತ್ತಿದ್ದೇವೆ. ವೈದಕೀಯ ಸೇವೆ ನೀಡುವಾಗ ಧರ್ಮ, ಪ್ರಾಂತ್ಯ ನೋಡಬೇಡಿ ಎಂದು ತನ್ವೀರ್ ಸೇಠ್ ತಿಳಿಸಿದರು.

Key words: No tender -process – drug –purchase- MLA- Tanveer Sait