ದೇಶದಲ್ಲಿ LPG ಗ್ಯಾಸ್, ಪೆಟ್ರೋಲ್ ಡಿಸೇಲ್ ಗೆ ಅಭಾವವಿಲ್ಲ- ಪೆಟ್ರೋಲಿಯಂ ಸಚಿವಾಲಯ ಸ್ಪಷ್ಟನೆ

ನವದೆಹಲಿ,ಮಾರ್ಚ್,13,2026 (www.justkannada.in): ದೇಶದಲ್ಲಿ LPG ಗ್ಯಾಸ್ ಸಿಲಿಂಡರ್, ಪೆಟ್ರೋಲ್ ಡಿಸೇಲ್ ಗೆ ಅಭಾವವಿಲ್ಲ ಎಂದು ಪೆಟ್ರೋಲಿಯಂ ಸಚಿವಾಲಯದ ಜಂಟಿ ಕಾರ್ಯದರ್ಶಿ ಸುಜಾತ ಶರ್ಮಾ ಅವರು ಸ್ಪಷ್ಟಪಡಿಸಿದ್ದಾರೆ.

ಈ ಕುರಿತು ಪ್ರಕಟಣೆ ಮೂಲಕ ಪ್ರತಿಕ್ರಿಯಿಸಿರುವ ಪೆಟ್ರೋಲಿಯಂ ಸಚಿವಾಲಯದ ಜಂಟಿ ಕಾರ್ಯದರ್ಶಿ ಸುಜಾತ ಶರ್ಮಾ,   ದೇಶದಲ್ಲಿ ಎಲ್ ಪಿಜಿ ಗ್ಯಾಸ್ ಸಿಲಿಂಡರ್ ಗೆ ಅವಭಾವವಿಲ್ಲ ಪೆಟ್ರೋಲ್  ಡೀಸೆಲ್ ಸಹ ಸಾಕಷ್ಟಿದೆ. ಯಾವುದೇ ಅಭಾವವಿಲ್ಲ ಎಂದಿದ್ದಾರೆ.

ದೇಶದ 25 ಸಾವಿರ ವಿತರಕರ ಮಾಹಿತಿ ಸಂಗ್ರಹಿಸಲಾಗಿದೆ. ವಿತರಕರ ಬಳಿಯೂ ಕೊರತೆ ಬಗ್ಗೆ ವರದಿ ಆಗಿಲ್ಲ . ಗ್ಯಾಸ್ ಸಿಲಿಂಡರ್ ಬುಕ್ಕಿಂಗ್ ನಲ್ಲಿ ಬಾರಿ ಹೆ್ಚ್ಚಳವಾಗಿದೆ ಮಾ.12 ರಂದು 75.7 ಲಕ್ಷ ಸಿಲಿಂಡರ್ ಬುಕ್ಕಿಂಗ್ ಆಗಿದೆ . ಗೃಹಬಳಕೆಯ ಪಿಎನ್ ಜಿ ಸಾರಿಗೆ ಸಿಎನ್ ಜಿಗೆ 100% ಪೂರೈಕೆ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.

Key words:  no shortage LPG gas, petrol, diesel, Petroleum Ministry