ಮಂಗಳೂರು ಗಲಭೆಯಲ್ಲಿ ಮೃತಪಟ್ಟವರಿಗೆ ಪರಿಹಾರ ಘೋಷಣೆ ಮಾಡಿಲ್ಲ- ಸಿಎಂ ಬಿಎಸ್ ಯಡಿಯೂರಪ್ಪ ಸ್ಪಷ್ಟನೆ…

ಮಂಗಳೂರು,ಡಿ,25,2019(www.justkannada.in): ಮೃತಪಟ್ಟವರಿಗೆ ಪರಿಹಾರ ಘೋಷಿಸಿಲ್ಲ. ತನಿಖೆ ಮುಗಿಯುವವರೆಗೂ ಪರಿಹಾರ ನೀಡಲ್ಲ ಎಂದು ಸಿಎಂ ಬಿಎಸ್ ಯಡಿಯೂರಪ್ಪ ಸ್ಪಷ್ಟನೆ ನೀಡಿದ್ದಾರೆ.

ಇಂದು ಮಂಗಳೂರಿನ ಸರ್ಕ್ಯೂಟ್ ಹೌಸ್ ನಲ್ಲಿ ಅಧಿಕಾರಿಗಳ ಜತೆ ಸಿಎಂ ಬಿಎಸ್ ಯಡಿಯೂರಪ್ಪ ಸಭೆ ನಡೆಸಿ ಚರ್ಚಿಸಿದರು. ಸಭೆಯಲ್ಲಿ ದಕ್ಷಿಣ ಕನ್ನಡ  ಜಿಲ್ಲಾಧಿಕಾರಿ ಸಿಂದೂ ಬಿ ರೋಪೇಶ್, ಶಾಸಕರಾದ ಭರತ್ ಶೆಟ್ಟಿ, ವೇದವ್ಯಾಸ್ ಕಾಮತ್  ಉಪಸ್ಥಿತರಿದ್ದರು.

ಸಭೆ ಬಳಿಕ ಮಾಧ್ಯಮದ ಜತೆ ಮಾತನಾಡಿದ ಸಿಎಂ ಬಿಎಸ್ ಯಡಿಯೂರಪ್ಪ, ಮೃತರ ಕುಟುಂಬಗಳಿಗೆ ಪರಿಹಾರ ನೀಡುವ ಬಗ್ಗೆ ಚರ್ಚೆ ಮಾಡಿ ನಿರ್ಧರಿಸುತ್ತೇವೆ.   ಪ್ರಕರಣ ಸಂಬಂಧ ಮೃತಪಟ್ಟವರು ತಪ್ಪಿತಸ್ಥರು ಎಂದು ಸಾಬೀತಾದ್ರೆ ಮೃತರ ಕುಟುಂಬಕ್ಕೆ ಪರಿಹಾರ ನೀಡಿದ್ರೆ ಅಪರಾಧವಾಗುತ್ತದೆ. ಹೀಗಾಗಿ ತನಿಖೆ ಮುಗಿವರೆಗೂ ಪರಿಹಾರ ನೀಡಲ್ಲ ಎಂದರು.

ಮಂಗಳೂರು  ಗಲಭೆ ಕುರಿತು ಸರ್ಕಾರದ ಮೇಲೆ ಕಾಂಗ್ರೆಸ್ ಆರೋಪ ಕುರಿತು ಪ್ರತಿಕ್ರಿಯಿಸಿದ ಸಿಎಂ ಬಿಎಸ್ ಯಡಿಯೂರಪ್ಪ, ಕಾಂಗ್ರೆಸ್ ನಾಯಕರ ಟೀಕೆಗಳಿಗೆ ಪೊಲೀಸರು ರಿಲೀಸ್ ಮಾಡಿರುವ ದೃಶ್ಯಗಳೇ ಉತ್ತರವಾಗಿವೆ ಎಂದು ತಿಳಿಸಿದರು.

Key words: No relief – victims – Mangalore riots-CM BS Yeddyurappa -clarifies