Sunday, August 9, 2026

BDA Apartments

Home Front Page ಒತ್ತಡ ಹಾಕಿ ಮೀಸಲಾತಿ ಪಡೆಯಲು ಆಗಲ್ಲ- ಸಚಿವ ಕೆ.ಎಸ್ ಈಶ್ವರಪ್ಪ….

ಒತ್ತಡ ಹಾಕಿ ಮೀಸಲಾತಿ ಪಡೆಯಲು ಆಗಲ್ಲ- ಸಚಿವ ಕೆ.ಎಸ್ ಈಶ್ವರಪ್ಪ….

ಬಾಗಲಕೋಟೆ,ಫೆಬ್ರವರಿ,25,2021(www.justkannada.in):  ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ   ನೀಡುವಂತೆ ಆಗ್ರಹಿಸಿ ಬಸವ ಜಯಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಹೋರಾಟ ನಡೆಯುತ್ತಿದ್ದು,  ಮಾರ್ಚ್ 4ಕ್ಕೆ ಡೆಡ್ ಲೈನ್ ನೀಡಲಾಗಿದೆ.jk

ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್ ಈಶ್ವರಪ್ಪ, ಒತ್ತಡ ಹಾಕಿ ಮೀಸಲಾತಿ ಪಡೆಯಲು ಆಗುವುದಿಲ್ಲ ಎಂದು ಟಾಂಗ್ ನೀಡಿದ್ದಾರೆ. No pressure - reservation - Minister -KS Eshwarappa

ಬಾಗಲಕೋಟೆಯಲ್ಲಿ ಇಂದು ಮಾತನಾಡಿದ ಸಚಿವ ಕೆ.ಎಸ್ ಈಶ್ವರಪ್ಪ, ಅರ್ಹತೆಗೆ ತಕ್ಕಂತೆ ಮೀಸಲಾತಿ ಸಿಗಬೇಕು. ಈಗ ಶ್ರೀಮಂತರಿಗೆ ಮೀಸಲಾತಿ ಮುಂದುವರೆಯುತ್ತಿದೆ. ಇದು ದುರ್ದೈವ. ಹೀಗೆ ಲಾಭ ಪಡೆದವರಿಗೆ ಮೀಸಲಾತಿ ರದ್ದು ಮಾಡಬೇಕು. ಬಡವರಿಗೆ ಮೀಸಲಾತಿ ಸಿಗಬೇಕು. ಇದರ ಬಗ್ಗೆ ಮುಂದಿನ ದಿನಗಳಲ್ಲಿ ಚಿಂತನೆ ನಡೆಸಬೇಕಿದೆ  ಎಂದು ಹೇಳಿದರು.

Key words: No pressure – reservation – Minister -KS Eshwarappa