Tuesday, August 4, 2026

BDA Apartments

Home Front Page ಸಿಎಂ ಸಿದ್ಧರಾಮಯ್ಯ ರಾಜೀನಾಮೆಗೆ ಯಾವುದೇ ಒತ್ತಡ ಇಲ್ಲ – ಸಚಿವ ಸತೀಶ್ ಜಾರಕಿಹೊಳಿ

ಸಿಎಂ ಸಿದ್ಧರಾಮಯ್ಯ ರಾಜೀನಾಮೆಗೆ ಯಾವುದೇ ಒತ್ತಡ ಇಲ್ಲ – ಸಚಿವ ಸತೀಶ್ ಜಾರಕಿಹೊಳಿ

ಬೆಂಗಳೂರು,ಸೆಪ್ಟಂಬರ್,25,2024 (www.justkannada.in): ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ಯಾವುದೇ ಒತ್ತಡವಿಲ್ಲ. ಏನೇ ಪರಿಸ್ಥಿತಿ ಇದ್ದರೂ ಸಿದ್ದರಾಮಯ್ಯ ಸಿಎಂ ಆಗಿ ಮುಂದುವರೆಯುತ್ತಾರೆ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಸತೀಶ್ ಜಾರಕಿಹೊಳಿ, ಸಿದ್ದರಾಮಯ್ಯ ಸಿಎಂ ಸ್ಥಾನದಲ್ಲಿದ್ದಾರೆ. ಹೀಗಾಗಿ ಸಿಎಂ ಬದಲವಣೆ ಪ್ರಶ್ನೆಯೇ ಇಲ್ಲ. ಸಿಎಂ ರಾಜೀನಾಮೆಗೆ ಯಾವ ಒತ್ತಡವೂ ಇಲ್ಲ. ದಲಿತ ಸಿಎಂ ಚರ್ಚೆ  ಈ ಸಂದರ್ಭದಲ್ಲಿ ಅನವಶ್ಯಕ. ಎಲ್ಲದಕ್ಕೂ ರಾಜೀನಾಮೆ ಪರಿಹಾರವೇ?  ರಾಜೀನಾಮೆ ಕೊಟ್ಟರೆ ಎಲ್ಲವೂ ಸರಿಯಾಗಿಬಿಡುತ್ತಾ..? ಎಂದು ಪ್ರಶ್ನಿಸಿದರು.

ಏನೇ ಪರಿಸ್ಥಿತಿ ಇದ್ದರೂ ಸಿದ್ದರಾಮಯ್ಯ ಸಿಎಂ ಆಗಿ ಮುಂದುವರೆಯುತ್ತಾರೆ.  ಕೇಜ್ರಿವಾಲ್ ಮಾಡೆಲ್ 2 ಇದ್ದರೂ ಇರಬಹುದು. ಕೇಂದ್ರ ಸರ್ಕಾರದ 25 ಸಚಿವರ ವಿರುದ್ದವೂ ಕೇಸ್ ಇದೆ ಅವರೆಲ್ಲಾ ಮಂತ್ರಿಗಳಾಗಿ ಮುಂದುವರೆದಿಲ್ಲವಾ. ಹಾಗೆಯೇ  ಸಿದ್ದರಾಮಯ್ಯ ಸಹ ಸಿಎಂ ಆಗಿ ಮುಂದುವರೆಯುತ್ತಾರೆ ಎಂದು ಸತೀಶ್ ಜಾರಕಿಹೊಳಿ ತಿಳಿಸಿದರು.

Key words: no pressure, CM Siddaramaiah, resignation, Minister, Satish Jarakiholi