ಮಣಿಪುರದಲ್ಲೂ ಕಮಲ ಅರಳುವ ಸಾಧ್ಯತೆ: ಮ್ಯಾಜಿಕ್ ನಂಬರ್ ಸಿಗದಿದ್ದರೆ ಅತಂತ್ರ ಸರಕಾರ

ಬೆಂಗಳೂರು, ಮಾರ್ಚ್ 10, 2022 (www.justkannada.in): ಮಣಿಪುರದಲ್ಲಿ ಭಾರತೀಯ ಜನತಾ ಪಕ್ಷ ಮುನ್ನಡೆ ಸಾಧಿಸಿದ್ದು, ಕಾಂಗ್ರೆಸ್ ದ್ವಿತೀಯ ಸ್ಥಾನಕ್ಕೆ ತಳ್ಳಲ್ಪಟ್ಟಿದೆ.

60 ಸದಸ್ಯ ಬಲದ ಮಣಿಪುರ ವಿಧಾನಸಭೆಯಲ್ಲಿ ಸರ್ಕಾರ ರಚಿಸಲು 31 ಅಭ್ಯರ್ಥಿಗಳು ಗೆಲುವು ಸಾಧಿಸಬೇಕಾಗಿದೆ.

ಮಣಿಪುರದಲ್ಲಿ ಸದ್ಯದ ಮತಎಣಿಕೆ ಟ್ರೆಂಡ್ ಪ್ರಕಾರ, ಈಗಾಗಲೇ ಬಿಜೆಪಿಯು ಬಹುಮತದತ್ತ ಓಟ ನಡೆಸಿದ್ದು, 29 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಇನ್ನು ಕಾಂಗ್ರೆಸ್‌ 9 ಕ್ಷೇತ್ರದಲ್ಲಿ ಮುನ್ನಡೆಯಲ್ಲಿದೆ. ಉಳಿದಂತೆ ಎನ್‌ಪಿಪಿ ಮೂರು ಹಾಗೂ ಇತರೆ ಪಕ್ಷಗಳು 19 ಕ್ಷೇತ್ರಗಳಲ್ಲಿ ಮುನ್ನಡೆಯಲ್ಲಿದೆ.

ಇನ್ನು ಗೋವಾದ ಎಲ್ಲಾ 40 ವಿಧಾನಸಭಾ ಕ್ಷೇತ್ರಗಳಿಗೆ ಫೆಬ್ರುವರಿ 14ರಂದು ಒಂದೇ ಹಂತದಲ್ಲಿ ಮತದಾನ ನಡೆದಿತ್ತು. ಸುಮಾರು ಶೇ.79ರಷ್ಟು ಮತದಾನವಾಗಿತ್ತು. ಭಾರತೀಯ ಜನತಾ ಪಕ್ಷ 18  ಸ್ಥಾನಗಳಲ್ಲಿ ಹಾಗೂ ಕಾಂಗ್ರೆಸ್ ಪಕ್ಷ 12 ಆಪ್ 2 ಇತರೆ 8 ಸ್ಥಾನಗಳಲ್ಲಿ ಮುನ್ನಡೆ ಇತರರು 23 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದಾರೆ.