ಜೆಡಿಎಸ್ ಗೆ ಪ್ರತ್ಯೇಕ ಆಹ್ವಾನ ನೀಡುವ ಅಗತ್ಯತೆ ಇಲ್ಲ- ಹೆಚ್.ಡಿಕೆಗೆ ಕೆ.ಸಿ ವೇಣುಗೋಪಾಲ್ ಟಾಂಗ್.

ಬೆಂಗಳೂರು,ಜುಲೈ,17,2023(www.justkannada.in):  ಇಂದು ಮತ್ತು ನಾಳೆ ನಡೆಯುವ ಮಹಾಮೈತ್ರಿಕೂಟ ಸಭೆಗೆ ಜೆಡಿಎಸ್ ಗೆ ಆಹ್ವಾನ ವಿಚಾರ ಕುರಿತು ಪ್ರತಿಕ್ರಿಯಿಸಿದ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ ಸಿ.ವೇಣುಗೋಪಾಲ್, ಜೆಡಿಎಸ್ ಗೆ ಪ್ರತ್ಯೇಕ ಆಹ್ವಾನ ನೀಡುವ ಅಗತ್ಯತೆ ಇಲ್ಲ ಎಂದಿದ್ದಾರೆ.

ಬೆಂಗಳೂರಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕೆ.ಸಿ ವೇಣುಗೋಪಾಲ್, ಸೆಕ್ಯುಲರಿಸಂ ಮೇಲೆ ನಂಬಿಕೆ ಇರುವ ಹಾಗೂ ಸರ್ವಾಧಿಕಾರ ವಿರೋಧಿಸುವ ಯಾವ ಪಕ್ಷವನ್ನಾದರೂ ನಾವು ಸ್ವಾಗತಿಸುತ್ತೇವೆ. ಆದರೆ ಕೆಲ ಪ್ರಾದೇಶಿಕ ಪಕ್ಷಗಳು ಕಳೆದ ಚುನಾವಣೆಯಲ್ಲಿ ತನ್ನ ನಿಲುವು ಏನು ಎಂಬುದನ್ನು ಸಾಬೀತು ಮಾಡಿವೆ. ಸರ್ವಾಧಿಕಾರಿ ಧೋರಣೆ ವಿರೋಧಿಸುವ ಯಾರು ಬೇಕಾದರೂ ನಮಗೆ ಕೈ ಜೋಡಿಸಬಹುದು. ಅವರಿಗೆ ಪ್ರತ್ಯೇಕವಾಗಿ ಆಹ್ವಾನ ನೀಡುವ ಅಗತ್ಯತೆ ಇಲ್ಲ ಎಂದು ತಿರುಗೇಟು ನೀಡಿದರು.

ನಾಳೆ ಬೆಳಗ್ಗೆ 11 ಗಂಟೆಗೆ ವಿಪಕ್ಷಗಳ ಎರಡನೇ ಸಭೆ ಆರಂಭವಾಗಲಿದೆ. ಸಭೆಯಲ್ಲಿ 26 ಪಕ್ಷಗಳ ನಾಯಕರು ಪಾಲ್ಗೊಳ್ಳುತ್ತಾರೆ. ರಾತ್ರಿ ಸಿಎಂ ಸಿದ್ದರಾಮಯ್ಯ ಅವರು ಔತಣಕೂಟ ಏರ್ಪಡಿಸಿದ್ದಾರೆ. ಎಲ್ಲ ಪಕ್ಷಗಳು ಒಂದೇ ಸಾಮಾನ್ಯ ವಿಷಯಕ್ಕಾಗಿ ಸೇರುತ್ತಿದ್ದೇವೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ ಸಿ.ವೇಣುಗೋಪಾಲ್ ಹೇಳಿದರು.

ಗೇಮ್ ಚೇಂಜರ್ ಸಭೆ ಆಗುತ್ತೆಂಬ ವಿಶ್ವಾಸವಿದೆ. ಇದೇ ನಮ್ಮ ಮೊದಲ ಅಸಲಿ ಜಯ ಎಂದು ಭಾವಿಸುತ್ತೇನೆ. ಸಂಸತ್ತ ಅಧಿವೇಶನ 20 ರ ನಂತರ ಪ್ರಾರಂಭವಾಗುತ್ತದೆ. ಪಾರ್ಲಿಮೆಂಟ್ ಸ್ಟ್ಯಾಟರ್ಜಿ ಬಗ್ಗೆ ಚರ್ಚೆ ಮಾಡುತ್ತೇವೆ ಎಂದು ಕೆ.ಸಿ ವೇಣುಗೋಪಾಲ್ ತಿಳಿಸಿದರು.

Key words: no need -separate-invitation – JDS-KC Venugopal