ಬಿ.ಕೆ ಹರಿಪ್ರಸಾದ್ ಗೆ ನೋಟಿಸ್ ಕೊಡುವ ಅಗತ್ಯವಿಲ್ಲ- ಗೃಹ ಸಚಿವ ಡಾ.ಜಿ.ಪರಮೇಶ್ವರ್.

ಬೆಂಗಳೂರು,ಜನವರಿ,4,2024(www.justkannada.in): ಗೋಧ್ರಾ ಹೇಳಿಕೆಗೆ ಸಂಬಂಧಿಸಿದಂತೆ ಬಿ.ಕೆ ಹರಿಪ್ರಸಾದ್ ಗೆ ನೋಟಿಸ್ ಕೊಡುವ ಅಗತ್ಯವಿಲ್ಲ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.

ಈ ಕುರಿತು ಮಾತನಾಡಿದ ಡಾ.ಜಿ.ಪರಮೇಶ್ವರ್, . ಹೇಳಿದ ಎಲ್ಲರಿಗೂ ನೋಟಿಸ್ ಕೊಡೋಕೆ ಆಗುತ್ತಾ ನೋಟಿಸ್ ಕೊಟ್ರೆ ಎಷ್ಟು  ಜನರಿಗೆ ಅಂತಾ ಕೊಡೋಕೆ ಆಗುತ್ತೆ. ಗುಪ್ತಚರ ಇಲಾಖೆ ಯಾವುದೇ ಅಹಿತಕರ ಘಟನೆಗೆ ಅವಕಾಶ ಕೊಡಲ್ಲ. ಹರಿ ಪ್ರಸಾದ್ ಬಳಿ ಒಂದಷ್ಟು  ಮಾಹಿತಿ ಇರುತ್ತೆ. ಸಮಯ ಬಂದಾಗ ಕೇಳೋಣ ಎಂದರು.

ಶ್ರೀಕಾಂತ್ ಪೂಜಾರಿಯನ್ನ ಬಂಧಿಸಿದ ಇನ್ಸ್ ಪೆಕ್ಟರ್ ಸಸ್ಪೆಂಡ್ ಮಾಡಬೇಕು ಎಂಬ ಬಿಜೆಪಿ ನಾಯಕರ ಆಗ್ರಹಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಡಾ.ಜಿ.ಪರಮೇಶ್ವರ್, ಯಾವ ಕಾರಣಕ್ಕಾಗಿ ಸಸ್ಪೆಂಡ್ ಮಾಡಬೇಕು.  ಅವರೇನು ತಪ್ಪುಮಾಡಿದ್ದಾರೆ ಅಂತ ಸಸ್ಪೆಂಡ್ ಮಾಡಬೇಕು.  ಬಿಜೆಪಿಗೆ ಇಷ್ಟ ಇಲ್ಲ ಅಂತಾ ಸಸ್ಪೆಂಡ್ ಮಾಡಬೇಕಾ..? ಅವರನ್ನ ಕಡ್ಡಾಯ ರಜೆ ಮೇಲೆ ಕಳಿಸಿಲ್ಲ ಎಂದು ತಿಳಿಸಿದರು.

Key words: no need – notice – BK Hariprasad – Home Minister- Dr. G. Parameshwar.