ಭಾರತ್ ಎಂಬ ಹೆಸರಿನ ಅಗತ್ಯವಿಲ್ಲ- ದೇಶದ ಹೆಸರು ಬದಲಾವಣೆ ಕುರಿತು ಸಿಎಂ ಸಿದ್ಧರಾಮಯ್ಯ ಪ್ರತಿಕ್ರಿಯೆ.

ಬೆಂಗಳೂರು,ಸೆಪ್ಟಂಬರ್,5,2023(www.justkannada.in): ಕೇಂದ್ರ ಸರ್ಕಾರವು ಸೆ.18ರಿಂದ ಐದು ದಿನಗಳ ವಿಶೇಷ ಸಂಸತ್ ಅಧಿವೇಶನ ಕರೆದಿದ್ದು, ಈ ನಡುವೆ ದೇಶದ ಹೆಸರನ್ನು ಬದಲಾವಣೆ ಮಾಡಲು ಕೇಂದ್ರ ಸರ್ಕಾರ ಮುಂದಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿದೆ. ದೇಶದ ಹೆಸರನ್ನು ಇಂಡಿಯಾದಿಂದ ಭಾರತ ಎಂದು ಬದಲಾವಣೆ ಮಾಡಲು ಮುಂದಾಗಿದೆ ಎಂದು ವರದಿಯಾಗಿದೆ.

ಇದಕ್ಕೆ ಪುಷ್ಠಿ ನೀಡುವಂತೆ ರಾಷ್ಟ್ರಪತಿ ಭವನದಲ್ಲಿ ಆಯೋಜಿಸಲಾಗಿರುವ ಜಿ20 ಶೃಂಗಸಭೆಯ ಔತಣಕೂಟಕ್ಕೆ ಆಹ್ವಾನಿಸುವ ಪತ್ರಿಕೆಯಲ್ಲಿ ‘ಪ್ರೆಸಿಡೆಂಟ್ ಆಫ್ ಇಂಡಿಯಾ’ ಎಂದು ಬರೆಯುವ ಬದಲು ‘ಪ್ರೆಸಿಡೆಂಟ್ ಆಫ್ ಭಾರತ್’ ಎಂದು ಬರೆಯಲಾಗಿದೆ.

ಈ ಕುರಿತು ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿರುವ ಸಿಎಂ ಸಿದ್ಧರಾಮಯ್ಯ, ಭಾರತ್ ಎಂಬ ಹೆಸರಿನ ಅಗತ್ಯವಿಲ್ಲ.  ನಮ್ಮ ಸಂವಿಧಾನದಲ್ಲಿ ಈಗಾಗಲೇ ಭಾರತದ ಸಂವಿಧಾನ ಎಂದು ಬರೆದಿದೆ.  ಹೀಗಾಗಿ ಹೆಸರು ಬದಲಾಯಿಸುವ ಅವಶ್ಯಕತೆ ಇಲ್ಲ ಎಂದಿದ್ದಾರೆ.

Key words: no need – name –Bharat-CM Siddaramaiah