ಹಿಂದಿ ಸಾಮ್ರಾಜ್ಯದ ದೆಹಲಿಯ ದೊರೆಯೊಂದಿಗೆ ಸಾಮಂತರು ! ರಾಜ್ಯ ಸರಕಾರದ ವಿರುದ್ಧ ಸೋಷಿಯಲ್ ಮೀಡಿಯಾದಲ್ಲಿ ಆಕ್ರೋಶ

ಬೆಂಗಳೂರು, ಜನವರಿ 17, 2021 (www.justkannada.in): ರಾಜ್ಯ ಪ್ರವಾಸದಲ್ಲಿರುವ ಕೇಂದ್ರ ಸಚಿವ ಅಮಿತ್ ಶಾ ಕಾರ್ಯಕ್ರಮದಲ್ಲಿ ಕನ್ನಡದ ಕಡೆಗಣನೆಗೆ ಸೋಷಿಯಲ್ ಮೀಡಿಯಾದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.

ಟ್ವಿಟ್ಟರ್, ಫೇಸ್ ಬುಕ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಅಮಿತ್ ಶಾ ಪಾಲ್ಗೊಂಡಿರುವ ಕಾರ್ಯಕ್ರಮಗಳ ಫೋಟೋಗಳಲ್ಲಿ ಕನ್ನಡ ಮಾಯವಾಗಿರುವ ಫೋಟೋಗಳು ವೈರಲ್ ಆಗುತ್ತಿವೆ.

‘ಹಿಂದಿ ಸಾಮ್ರಾಜ್ಯದ ದೆಹಲಿಯ ದೊರೆಯೊಂದಿಗೆ ಸಾಮಂತರು’ ಮತ್ತಿತ್ಯಾದಿ ಶೀರ್ಷಿಕೆಗಳೊಂದಿಗೆ ರಾಜ್ಯ ಸರಕಾರ, ಸಿಎಂ ಸೇರಿದಂತೆ ಸಚಿವರ ವಿರುದ್ಧ ಅಸಮಾಧಾನ ವ್ಯಕ್ತವಾಗುತ್ತಿದೆ.